Select Your Language

Notifications

webdunia
webdunia
webdunia
webdunia

ಸೋಂಕು ಏರಿಕೆಗೆ ಬಯಲಾಯ್ತು ಕಾರಣ!

ಸೋಂಕು ಏರಿಕೆಗೆ ಬಯಲಾಯ್ತು ಕಾರಣ!
ನವದೆಹಲಿ , ಶುಕ್ರವಾರ, 22 ಏಪ್ರಿಲ್ 2022 (10:17 IST)
ನವದೆಹಲಿ : ದೆಹಲಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ದಿಢೀರನೆ ಕೋವಿಡ್ ಸೋಂಕು ಏರಿಕೆಗೆ ಒಮಿಕ್ರೋನ್ನ ಹೊಸ ಉಪತಳಿಗಳೇ ಕಾರಣವಿರಬಹುದು ಎಂದು ಮೂಲಗಳು ಹೇಳಿವೆ.

ಏಪ್ರಿಲ್ ತಿಂಗಳ ಮೊದಲ 15 ದಿನದ ಅವಧಿಯಲ್ಲಿ ದೆಹಲಿ, ಉತ್ತರಪ್ರದೇಶ, ಹಯಾರ್ಣದಲ್ಲಿ ದಿಢೀರಣೆ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿತ್ತು. ಹೀಗಾಗಿ ಇದು ವೈರಸ್ನ ಹೊಸ ತಳಿಯಾಗಿರಬಹುದು, ಇದು 4ನೇ ಅಲೆಗೆ ಕಾರಣವಾಗಬಹುದು ಎಂಬ ಆತಂಕಗಳು ಮೂಡಿದ್ದವು.

ಆದರೆ ಇದೀಗ ಏಪ್ರಿಲ್ ತಿಂಗಳ ಮೊದಲ 15 ದಿನಗಳ ಅವಧಿಯಲ್ಲಿ ಪತ್ತೆಯಾದ ಸೋಂಕಿನ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಒಳಪಡಿಸಿದ ವೇಳೆ ಶೇ.52ರಷ್ಟುಪ್ರಕರಣಗಳಿಗೆ ಒಮಿಕ್ರೋನ್ನ ಉಪತಳಿ ಬಿಎ.2.12 ಮತ್ತು ಶೇ.11 ಪ್ರಕರಣಗಳಿಗೆ ಬಿಎ.2.10 ಕಾರಣ ಎಂದು ಕಂಡುಬಂದಿದೆ.

ಇದರ ಜೊತೆಗೆ ಬಿಎ.2.12.1 ಎಂಬ ಮತ್ತೊಂದು ಉಪತಳಿ ಕೂಡಾ ಕೆಲವೊಂದು ಮಾದರಿಗಳಲ್ಲಿ ಪತ್ತೆಯಾಗಿದೆ. ಬಿಎ.2 ಎಂದು ಗುರುತಿಸಲಾಗುವ ಒಮಿಕ್ರೋನ್ ತಳಿಗೆ ಹೋಲಿಸಿದರೆ ಬಿಎ.2.12 ಉಪತಳಿಯ ಹರಡುವಿಕೆ ಪ್ರಮಾಣ ಶೇ.30-90ರಷ್ಟುಹೆಚ್ಚಿದೆ ಎಂದು ಜಿನೋಮಿಕ್ ಸೀಕ್ವೆನ್ಸಿಂಗ್ ನಡೆಸುವ ಪ್ರಯೋಗಾಲಯಗಳ ಒಕ್ಕೂಟ ಸಂಸ್ಥೆಯ ಮೂಲಗಳು ತಿಳಿಸಿವೆ.

ಜೊತೆಗೆ ನೆರೆಯ ಉತ್ತರಪ್ರದೇಶ ಮತ್ತು ಹರ್ಯಾಣದಿಂದ ಈ ತಿಂಗಳ ಮೊದಲ 15 ದಿನಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲೂ ಬಹುತೇಕ ಇದೇ ಕೋವಿಡ್ ಉಪತಳಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಏಕತೆ ಜತೆ ರಾಜಿ ಇಲ್ಲ: ನರೇಂದ್ರ ಮೋದಿ