Select Your Language

Notifications

webdunia
webdunia
webdunia
webdunia

5 ರಾಜ್ಯಗಳಲ್ಲಿ ಬಿಸಿಗಾಳಿ, 45 ಡಿಗ್ರಿ ದಾಟಿದ ಉಷ್ಣಾಂಶ!

heat wave delhi rajastan ರಾಜಸ್ಥಾನ್‌ ದೆಹಲಿ ಬಿಸಿಗಾಳಿ
bengaluru , ಗುರುವಾರ, 28 ಏಪ್ರಿಲ್ 2022 (15:13 IST)
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಗಾಳಿ ಅಬ್ಬರ ಹೆಚ್ಚಾಗುತ್ತಿದ್ದು, 45 ಡಿಗ್ರಿ ಉಷ್ಣಾಂಶ ದಾಟಿದ್ದು, 5 ರಾಜ್ಯಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇತಿಹಾಸದಲ್ಲೇ ಎಂದೂ ಕಂಡು ಕೇಳರಿಯದ ಬಿಸಿಗಾಳಿ ಈ ಬಾರಿ ತಟ್ಟಲಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿದೆ.
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇನ್ನೂ 2 ಡಿಗ್ರಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ರಾಜಸ್ಥಾನ್‌, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾಗಳಲ್ಲಿ ಈಗಾಗಲೇ 45 ಡಿಗ್ರಿ ಉಷ್ಣಾಂಶ ದಾಟಿದೆ. ಮೇ ಮೊದಲ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆಯಾದರೆ ಬಿಸಿಗಾಳಿ ಪ್ರಮಾಣ ಕಡಿಮೆ ಆಗಬಹುದು ಇಲ್ಲದಿದ್ದರೆ ಮೇನಲ್ಲಿ ಬಿಸಿಲು ಇನ್ನಷ್ಟು ಹೆಚ್ಚಬಹುದು ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಆಗುವುದು ನನ್ನ ಕನಸು, ರಾಷ್ಟ್ರಪತಿ ಅಲ್ಲ: ಮಾಯಾವತಿ