Select Your Language

Notifications

webdunia
webdunia
webdunia
webdunia

ಪ್ರಧಾನಿ ಆಗುವುದು ನನ್ನ ಕನಸು, ರಾಷ್ಟ್ರಪತಿ ಅಲ್ಲ: ಮಾಯಾವತಿ

ಪ್ರಧಾನಿ ಆಗುವುದು ನನ್ನ ಕನಸು, ರಾಷ್ಟ್ರಪತಿ ಅಲ್ಲ: ಮಾಯಾವತಿ
bengaluru , ಗುರುವಾರ, 28 ಏಪ್ರಿಲ್ 2022 (14:31 IST)
ಈ ದೇಶದ ಪ್ರಧಾನಿ ಆಗಬೇಕು ಎಂಬುದು ನನ್ನ ಕನಸು ಹೊರತು ರಾಷ್ಟ್ರಪತಿ ಅಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.
ಸಮಾಜವಾದಿ ಪಕ್ಷದವರು ನನ್ನನ್ನು ರಾಷ್ಟ್ರಪತಿ ಮಾಡಿ ಉತ್ತರ ಪ್ರದೇಶದಲ್ಲಿ ತಮ್ಮ ದಾರಿ ಸಲೀಸು ಮಾಡಿಕೊಳ್ಳುವ ಯೋಚನೆ ಬಿಡಬೇಕು ಎಂದು ಮಾಯಾವತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಮಾಡಿದ್ದರ ಹಿಂದೆ ಮಾಯಾವತಿ ಅವರನ್ನು ರಾಷ್ಟ್ರಪತಿ ಮಾಡಬೇಕು ಎಂಬುದು ಎಂಬ ವದಂತಿ ಹರಡಿತ್ತು. ಇದಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಹೇಳಿಕೆ ಬೆನ್ನಲ್ಲೇ ಮಾಯಾವತಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡಬಳ್ಳಾಪುರ: 6ನೇ ಮಹಡಿಯಿಂದ ಹಾರಿ ವಿದೇಶೀ ವಿದ್ಯಾರ್ಥಿನಿ ಆತ್ಮಹತ್ಯೆ