Select Your Language

Notifications

webdunia
webdunia
webdunia
webdunia

ಡಿಕೆಶಿ ಹೈವೋಲ್ಟೇಜ್ ಮೀಟಿಂಗ್?

ಡಿಕೆಶಿ ಹೈವೋಲ್ಟೇಜ್ ಮೀಟಿಂಗ್?
ನವದೆಹಲಿ , ಶನಿವಾರ, 23 ಏಪ್ರಿಲ್ 2022 (14:37 IST)
ನವದೆಹಲಿ : ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದ್ದು, ಕಾಂಗ್ರೆಸ್ ಭಾರೀ ತಯಾರಿ ಆರಂಭಿಸಿದೆ.

ಇದರ ಭಾಗವಾಗಿ ನವದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಈ ನಡುವೆ ಮುಂಬರುವ ಹಲವು ರಾಜ್ಯ ವಿಧಾನಸಭೆ ಚುನಾವಣೆ ಉತ್ತಮ ಸ್ಪರ್ಧೆ ನೀಡುವ ಇರಾದೆ ಹೊಂದಿದೆ. ಇದಕ್ಕಾಗಿ ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ಜೊತೆಗೂ ಮಾತುಕತೆ ನಡೆಸುತ್ತಿದ್ದು, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ಸಾಧ್ಯತೆಗಳಿದೆ.

ಹೀಗೆ ಕಾಂಗ್ರೆಸ್ ಸೇರಲಿರುವ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಚೇತರಿಕೆಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಇದರಲ್ಲಿ ಲೋಕಸಭೆಗೂ ಮುನ್ನ ವಿಧಾನಸಭೆ ಚುನಾವಣೆಗಳನ್ನು ಗೆಲ್ಲುವ ಟಾರ್ಗೆಟ್ ಅನ್ನು ಹೊಂದಿದೆ.

ಕರ್ನಾಟಕದ ಚುನಾವಣೆಯೂ ಲೋಕಸಭೆಗೂ ಮುನ್ನ ಬರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಹೈಕಮಾಂಡ್ ಸಭೆ ನಡೆಸಲಿದೆ ಎನ್ನಲಾಗಿದೆ.

ಇಂದು ನಡೆಯಲಿರುವ ಹೈವೋಲ್ಟೇಜ್ ಸಭೆಯಲ್ಲಿ ಸೋನಿಯಾಗಾಂಧಿ ಮತ್ತು ಪ್ರಶಾಂತ್ ಕಿಶೋರ್ ಇರಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ ಸದಸ್ಯತ್ವ ನೋಂದಣಿ, ಸಂಘಟನೆ ಮತ್ತು ಚುನಾವಣಾ ತಯಾರಿ ಮತ್ತು ಪ್ರಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಿಡ್ಜ್‌ನಲ್ಲಿ ಕುಳಿತು ಭೂಕುಸಿತದಿಂದ ಪಾರಾದ ಬಾಲಕ!