Publish Date: Thu, 28 Apr 2022 (20:00 IST)
Updated Date: Thu, 28 Apr 2022 (20:02 IST)
ಹೆತ್ತ ಮಗನ ಶವವನ್ನು ಬೈಕ್ನಲ್ಲಿ ಕೊಂಡೊಯ್ದ ಮನಕಲಕುವ ಘಟನೆಯೊಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ..ಹೆಗಲ ಮೇಲೆ ಹೊತ್ತು, ಮುದ್ದಾಡಿ ಸಾಕಿದ ಮಗ ಹೆಣವಾಗಿ ಮಲಗಿದ್ದ..ತಿರುಪತಿ ಮೂಲದ ವ್ಯಕ್ತಿಯೊಬ್ಬರು ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿದ್ದರು . ಆದರೆ, ಯಾವುದೇ ಆ್ಯಂಬುಲೆನ್ಸ್ ವ್ಯವಸ್ಥೆಯಾಗಲಿಲ್ಲ. ಕೊನೆಗೊಂದು ಆಂಬ್ಯುಲೆನ್ಸ್ ಬಂದರೂ ಅದರ ಚಾಲಕ ಆ ಹೆಣವನ್ನು ಸಾಗಿಸಲು ಭಾರೀ ಹಣ ಬೇಕೆಂದು ಬೇಡಿಕೆಯಿಟ್ಟಿದ್ದರಿಂದ ಆ ವ್ಯಕ್ತಿ ಬೈಕ್ನಲ್ಲಿ ತನ್ನ ಮಗನ ಮೃತದೇಹವನ್ನು ಸಾಗಿಸಿದ್ದಾನೆ..
ತಿರುಪತಿಯಿಂದ ಸುಮಾರು 90 ಕಿ. ಮೀ. ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್ನಲ್ಲಿ 10 ವರ್ಷದ ಮಗನ ಮೃತದೇಹವನ್ನು ಹೊತ್ತೊಯ್ಯು ವಂತೆ ಮಾಡಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.