Select Your Language

Notifications

webdunia
webdunia
webdunia
webdunia

ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ ಸಿಪಿವೈ

CM visited CPY after the audio went viral
bangalore , ಶನಿವಾರ, 14 ಜನವರಿ 2023 (19:10 IST)
ಆಪರೇಷನ್ ಕಮಲ ಕುರಿತ ತಮ್ಮ ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ  ಅವರನ್ನು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಭೇಟಿ ಮಾಡಿದ್ದು, ಇದೀಗ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ. ಯೋಗೇಶ್ವರ್ ಅವರು, ಆಡಿಯೋ ನನ್ನದಲ್ಲ. ಅದು ಫೇಕ್ ಆಡಿಯೋ. ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನನ್ನ ವಿರೋಧಿಗಳ ಪ್ಲ್ಯಾನ್ ಇದಾಗಿದ್ದು, ದಿನ ಬೆಳಗಾದರೆ ಹೀಗೆಲ್ಲ ಮಾತಾಡುತ್ತಾರೆ. ಕುಮಾರಸ್ವಾಮಿ ವಿರುದ್ಧ ನಾನು ಗೆಲ್ಲುವ ವಿಶ್ವಾಸ ಇದೆ. ಕುಮಾರಸ್ವಾಮಿ ಕಳೆದ 5 ವರ್ಷ ಏನೂ ಮಾಡಿಲ್ಲ. ನೂರಕ್ಕೆ ನೂರು ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯತ್ನಾಳ್ ನಾಲಿಗೆ ಕತ್ತರಿಸಬೇಕಾಗುತ್ತದೆ : ಯತ್ನಾಳ್ ಗೆ ಸಚಿವರ ಎಚ್ಚರಿಕೆ