Select Your Language

Notifications

webdunia
webdunia
webdunia
webdunia

ಯತ್ನಾಳ್ ನಾಲಿಗೆ ಕತ್ತರಿಸಬೇಕಾಗುತ್ತದೆ : ಯತ್ನಾಳ್ ಗೆ ಸಚಿವರ ಎಚ್ಚರಿಕೆ

ಯತ್ನಾಳ್ ನಾಲಿಗೆ ಕತ್ತರಿಸಬೇಕಾಗುತ್ತದೆ : ಯತ್ನಾಳ್ ಗೆ ಸಚಿವರ ಎಚ್ಚರಿಕೆ
bangalore , ಶನಿವಾರ, 14 ಜನವರಿ 2023 (19:06 IST)
ಅವನೊಬ್ಬ ಇದ್ದಾನೆ ಬಿಜಾಪುರದವನು. ಅವನು ಅಪ್ಪನಿಗೆ ಹುಟ್ಟಿದವನಲ್ಲ. ಅವನು ಪಿಂಪ್ ಆಗಿ ಕೆಲಸ ಮಾಡಿದ್ದಾನೆ. ನನಗೆ ಸಂಸ್ಕೃತಿ ಇದೆ. ಇನ್ನು ನಾಲಿಗೆ ಹರಿಬಿಟ್ಟರೆ ನಾಲಿಗೆ ಕತ್ತರಿಸ್ತೇನೆ ಎಂದು ಸಚಿವ ಮುರುಗೇಶ್‌ ನಿರಾಣಿ ಅವರು ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ಆರೋಪ ಮಾಡಿ ಅವಾಜ್‌ ಹಾಕಿದ್ದಾರೆ.ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಹೋರಾಟದ ಬಗ್ಗೆ ವಿಜಯಪುರದ ಶಾಸಕ ಬವಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸಿ.ಸಿ. ಪಾಟೀಲ್‌ ಹಾಗೂ ಮುರುಗೇಶ್‌ ನಿರಾಣಿ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಕುರಿತು ಸಚಿವ ಮುರುಗೇಶ್‌ ನಿರಾಣಿ, ಸಿ ಸಿ ಪಾಟೀಲ್ ಸೇರಿ ಶಾಸಕ ಯತ್ನಾಳ್ ಗೆ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.....ರಾಜ್ಯ ವಿಧಾನಸಭೆಯ ಹೊತ್ತಿನಲ್ಲಿ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡ್ತಾ ಇರೋರು ಪಕ್ಕಾ ರಾಜಕೀಯ ಮಾಡ್ತಾ ಇದ್ದಾರೆ. ಅಂದು ಏನು ಮಾತಾಡದವರು ಇಂದು ಹೋರಾಟ ಯಾಕೆ ಮಾಡುತ್ತಿದ್ದಾರೆ. ಎಸ್ಸಿ ಮತ್ತು ಎಸ್ಟಿ ಸಮಾಜದವರು ಯಾರು ಗಲಾಟೆ ಮಾಡಿಲ್ಲ. ಇವರು ಲಿಂಗಾಯತರನ್ನು ಒಡೆಯುತ್ತಿದ್ದಾರೆ. ಅವನು ಅಪ್ಪನಿಗೆ ಹುಟ್ಟಿದವನಾದರೆ ಪಾರ್ಟಿ ಬಿಟ್ಟು ಮಾತಾಡಬೇಕು ಎಂದು ಯತ್ನಾಳ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 17 ಕ್ಕೆ ರಾಜ್ಯ ಬಜೆಟ್ ಸಾಧ್ಯತೆ : ಸಿಎಂ ಬೊಮ್ಮಾಯಿ