ಸಿಲಿಕಾನ್ ಸಿಟಿಯ ಪ್ರೇಮಿಗಳ ನೆಚ್ಚಿನ ತಾಣ ಹಾಗೂ ವಾಯುವಿಹಾರಿಗಳ ಸ್ವರ್ಗ ಎಂದು ಕರೆಸಿಕೊಳ್ಳುವ ಲಾಲ್ ಬಾಗ್ ನಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಗಣರಾಜ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ರಾಜಧಾನಿ ಜನ್ರಿಗೆ 213 ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು ಈ ಫಲಪುಷ್ಪ ಪ್ರದರ್ಶನವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕ್ಕೋಳ್ಳೋಕೆ ಲಾಲ್ ಬಾಗ್ ಸಿದ್ದವಾಗ್ತಾ ಇದೆ. ಹಾಗಾದ್ರೆ ಈ ಬಾರಿ ಫಲಪುಷ್ಪ ಪ್ರದರ್ಶನದ ತಯಾರಿ ನಡಿತಾ ಇದೆ.
ಪ್ರತಿ ವರ್ಷ ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಹೂವಿನ ಲೋಕ ಮೇಳೈಸುತ್ತೆ. ಕಳೆದ ಎರೆಡು ವರ್ಷಗಳಿಂದ ಕರೋನಾ ಹಿನ್ನಲೆ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಬಾರಿ ಕರೋನ ಸೋಂಕು ಕಡಿಮೆಯಾಗಿದ್ದು ಸಿಲಿಕಾನ್ ಸಿಟಿಯಲ್ಲಿ ಎಲ್ಲ ಚಟುವಟಿಕೆಗಳು ಗರಿಗೇದರಿದ್ದು ಜನರೆಲ್ಲ ಮತ್ತೆ ಲವಲವಿಕೆಯಿಂದ ಮನೆಯಿಂದ ಹೊರಗಡೆ ಬರುತಿದ್ದು, ಹೀಗಾಗಿ ಲಾಲ್ ಬಾಗ್ ನಲ್ಲಿ ಹೂವಿನ ಲೋಕ ಅನಾವರಣಗೊಳ್ಳಲಿದ್ದು,ಇದಕ್ಕೆ ಈಗಾಗಲೇ ಭರದ ಸಿದ್ಧತೆ ಆರಂಭ ಗೊಂಡಿದೆ .
ಈ ಬಾರಿ ಪ್ಲವರ್ ಶೋ ವಿಶೇಷ ವೆನೆಂದ್ರೆ ಮೊದಲ ಬಾರಿಗೆ ಪ್ರದರ್ಶನದ ಮುಖ್ಯ ವಿಷಯವನ್ನು ಗಾಜಿನ ಮನೆಯ ಹೊರಗಿನ ವಿಶೇಷ ಮಂಟಪದಲ್ಲಿ ಚಿತ್ರಿಸಲಾಗುತ್ತೆ 1,500 ವರ್ಷಗಳ ಬೆಂಗಳೂರು ಇತಿಹಾಸ ಆಧಾರಿತ ಪರಿಕಲ್ಪನೆಯನ್ನು ಈ ವರ್ಷದ ಮಖ್ಯ ವಿಷಯವನ್ನಾಗಿಕೊಂಡಿದೆ ಈ ವರ್ಷದ ಮಖ್ಯ ಗಾಜಿನ ಮನೆಯಲ್ಲಿ ಅಲಂಕಾರಿಕ ಸಸ್ಯಗಳು ಆಯ್ದ ಕತ್ತರಿಸಿದ ಹೂವುಗಳ ವ್ಯವಸ್ಥೆ ಮತ್ತು ಪ್ರದರ್ಶನಕ್ಕೆ ಮುಖ್ಯ ಗಮನವನ್ನು ನೀಡಲಾಗುತ್ತಿದೆ, ಊಟಿ ಹಾಗೂ ಹಲವು ಕಡೆಗಳಿಂದ ಹೂವಿನ ಗಿಡಗಳನ್ನು ತರಿಸಿಕೊಳ್ಳಲಾಗುತತ್ತಿದೆ, ಇನ್ನು ಪ್ಲವರ್ ಶೋ ನ ಉಘ್ಘಾಟನೆಯನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ,ತೋಟಗಾರಿಕೆ ಸಚಿವರು ಶಾಸಕ ಶ್ರೀ.ಉದಯ್.ಬಿ. ಗರುಡಾಚರ್ ಎಂ.ಪಿ. ಶ್ರೀ. ತೇಜಸ್ವಿ ಸೂರ್ಯ, ಸೇರಿದಂತೆ ಅನೇಕ ಗಣ್ಯರು ನೇರವೇರಿಸಲಿದ್ದಾರೆ .
ಫಲಪುಷ್ಪ ಪ್ರದರ್ಶನದ ತಾಯಾರಿ ಅದ್ದೂರಿಯಾಗಿ ಸಾಗಿ ಬರುತ್ತಿದ್ದು ಬೆಂಗಳೂರಿಗರಂತೂ ಹೂವಿನ ಸೌಂದರ್ಯವನ್ನು ನೋಡಿ ಕಣ್ಣು ತುಂಬಿಸಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ .