Select Your Language

Notifications

webdunia
webdunia
webdunia
webdunia

ಶಬರಿಮಲೆಗೆ ಸೆಲೆಬ್ರಿಟಿ ಫೋಟೋ ತರುವಂತಿಲ್ಲ

Celebrity photos cannot be brought to Sabarimala'
ಕೇರಳ , ಶನಿವಾರ, 14 ಜನವರಿ 2023 (17:43 IST)
ಮಾಲಾಧಾರಿಗಳು ಶಬರಿಮಲೆ ಒಳಗೆ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್‌ಗಳು ಮತ್ತು ದೊಡ್ಡ ಛಾಯಾಚಿತ್ರಗಳನ್ನು ತರುವಂತಿಲ್ಲ. ಫೋಟೋಗಳನ್ನು ತರುವುದನ್ನು ತಡೆಯುವಂತೆ ಶಬರಿಮಲೆ ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಆದೇಶಿಸಿದೆ. ದೇವಾಲಯದ ಆವರಣದಲ್ಲಿ ಮಾಲಾಧಾರಿಗಳು ಭಕ್ತಿಪೂರ್ವಕವಾಗಿ ದೇವರಿಗೆ ಪೂಜೆ ಮಾಡುವಂತೆ ಕ್ರಮಕೈಗೊಳ್ಳಬೇಕೆಂದು ಮಂಡಳಿಗೆ ನ್ಯಾಯಾಲಯ ಸೂಚಿಸಿದೆ. ಭಕ್ತರು ಚಲನಚಿತ್ರ ತಾರೆಯರು ಮತ್ತು ರಾಜಕಾರಣಿಗಳ ಪೋಸ್ಟರ್‌ಗಳನ್ನು ಹಿಡಿದು ಸಂಗೀತ ವಾದ್ಯಗಳೊಂದಿಗೆ ಪ್ರದರ್ಶನ ನೀಡುತ್ತಿರುವುದು ಇತ್ತೀಚೆಗೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅನಿಲ್ K. ನರೇಂದ್ರನ್ ಮತ್ತು ನ್ಯಾಯಮೂರ್ತಿ P.G. ಅಜಿತ್ ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಪಿಲ್ಲರ್ ಕುಸಿಯಲು ಮೆಟ್ರೋ ಎಂಡಿ ನೇರ ಹೊಣೆ