Publish Date: Sat, 14 Jan 2023 (10:50 IST)
Updated Date: Sat, 14 Jan 2023 (10:47 IST)
ಬೆಂಗಳೂರು : ಒಂದೆಡೆ ಗೃಹ ಸಚಿವ ಆರಗ ಜ್ಞಾನೇಂದ್ರ ಗುಜರಾತ್ ಪ್ರವಾಸ, ಮತ್ತೊಂದೆಡೆ ಗೃಹಸಚಿವ ಪ್ರವಾಸದಿಂದ ಬಂದ ಮಾರನೇ ದಿನ ಗುಜರಾತ್ನಲ್ಲೇ ಸ್ಯಾಂಟ್ರೋ ರವಿ ಬಂಧನ.
ಈ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಎರಡು ಒಂದಕ್ಕೊಂದು ಇಂಟರ್ಲಿಂಕ್ ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸ್ತಿದೆ.
ಅಹಮದಾಬಾದ್ನಿಂದ ಮೊನ್ನೆ ರಾತ್ರಿ ಗುಜರಾತ್ ಪ್ರವಾಸ ಮುಗಿಸಿ ಆರಗ ಜ್ಞಾನೇಂದ್ರ ರಾಜ್ಯಕ್ಕೆ ವಾಪಸ್ ಆಗಿದ್ರು. ಇದೇ ಸಂಧರ್ಭದಲ್ಲಿ ಅಹಮದಾಬಾದ್ನಲ್ಲೇ ಸ್ಯಾಂಟ್ರೋ ರವಿ ಬಂಧನ ಆಗಿರುವುದಕ್ಕೆ ಕಾಂಗ್ರೆಸ್ ಗುಮಾನಿ ವ್ಯಕ್ತಪಡಿಸಿದೆ.