Select Your Language

Notifications

webdunia
webdunia
webdunia
webdunia

ಸಾಲ ತೀರಿಸದ್ದಕ್ಕೆ ಪದೇ ಪದೇ ರೇಪ್‌ ಮಾಡಿದ ಫೈನಾನ್ಸರ್!

ಸಾಲ ತೀರಿಸದ್ದಕ್ಕೆ ಪದೇ ಪದೇ ರೇಪ್‌ ಮಾಡಿದ ಫೈನಾನ್ಸರ್!
ಗಾಂಧಿನಗರ , ಮಂಗಳವಾರ, 20 ಡಿಸೆಂಬರ್ 2022 (15:03 IST)
ಗಾಂಧಿನಗರ : ವ್ಯಕ್ತಿಯೊಬ್ಬ ಫೈನಾನ್ಸರ್ ನೀಡಿದ್ದ 50,000 ರೂ.ಗಳನ್ನು ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಆತನ ಪತ್ನಿ ಮೇಲೆ ಅತ್ಯಾಚಾರವೆಸಗಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.

ಖಾಸಗಿ ಫೈನಾನ್ಸರಾದ ಅಜಿತ್ ಸಿನ್ಹ್ ಚಾವ್ಡಾ ಎಂಬಾತನಿಂದ ಆಟೋ ಚಾಲಕನೊಬ್ಬ ಸಾಲ ಪಡೆದಿದ್ದ. ಆದರೆ ಆ ಸಾಲವನ್ನು ತೀರಿಸಲು ವಿಫಲವಾಗಿದ್ದ. ಈ ಹಿನ್ನೆಲೆಯಲ್ಲಿ ಚಾವ್ಡಾ ಸಾಲ ಮಾಡಿದ್ದ ಆಟೋ ಚಾಲಕನ ಮನೆಗೆ ಬಂದು ಆತನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಕೃತ್ಯವನ್ನು ಚಿತ್ರೀಕರಿಸಿದ್ದಾನೆ.

ಅಷ್ಟೇ ಅಲ್ಲದೇ, ಚಾವ್ಡಾ ಆಟೋ ಚಾಲಕನ ಹೆಂಡತಿಯನ್ನು ಬಲವಂತವಾಗಿ ದೇವಸ್ಥಾನಕ್ಕೆ ಕರೆದೊಯ್ದು ಅವಳ ಹಣೆಗೆ ಸಿಂಧೂರ ಹಚ್ಚಿ ಅವಳನ್ನು ತನ್ನ ಹೆಂಡತಿ ಎಂದು ಘೋಷಿಸಿದ್ದಾನೆ. ಬಳಿಕ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಭೇಟಿ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. 

ಘಟನೆಗೆ ಸಂಬಂಧಿಸಿ ಸಂತ್ರಸ್ತೆ ದೂರು ದಾಖಲಿಸಲು ರಾಜ್ಕೋಟ್ ತಾಲೂಕಾ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಆದರೆ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅದಾದ ಬಳಿಕ ಆಕೆ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ಪೊಲೀಸರಿಗೆ ದೂರು ದಾಖಲಿಸಿಕೊಳ್ಳುವಂತೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಯೂಟಕ್ಕೆ ಅತಿಥಿಯಾಗಿ ಬಂದ ಮಂಗ!