Publish Date: Tue, 20 Dec 2022 (14:50 IST)
Updated Date: Tue, 20 Dec 2022 (15:00 IST)
ಶಿಕ್ಷಕರೋರ್ವರು ಕೋತಿಗೆ ಊಟ ಮಾಡಿಸಿದ ಅಪರೂಪದ ಘಟನೆಯೊಂದು ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದಲ್ಲಿ ನಡೆದಿದೆ. ಜಬ್ಬಲಗುಡ್ಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಇಬ್ರಾಹಿಂ ಅವರೇ ಕೋತಿಗೆ ಊಟ ಮಾಡಿಸಿದವರು. ಹೌದು, ಶಾಲೆಯಲ್ಲಿ ಮಕ್ಕಳ ಜೊತೆಗೂಡಿ ಬಿಸಿಯೂಟ ಮಾಡುತ್ತಿರುವಾಗ ಸ್ವಲ್ಪ ದೂರದಲ್ಲಿ ಕೋತಿಯೊಂದು ಕುಳಿತು ನೋಡುತ್ತಿತ್ತು. ಆದರೆ ಇನ್ನೂ ಮುಂದುವರೆದು ಶಿಕ್ಷಕರ ಕೈಯಿಂದ ಕೋತಿ ಬಿಸಿಯೂಟ ಉಂಡ ಘಟನೆಯೊಂದು ಇದೀಗ ವೈರಲ್ ಆಗುತ್ತಿದೆ. ಮಕ್ಕಳು ಮಂಗಕ್ಕೆ ಒಂದು ತುತ್ತು ಅನ್ನ ಹಾಕಿದ್ದಾರೆ. ಆಗ ಕೋತಿ ಆ ಅನ್ನವನ್ನು ಸೇವಿಸಿದೆ. ಅಲ್ಲದೇ ಸ್ವಲ್ಪ ಹತ್ತಿರಕ್ಕೂ ಬಂದಿದೆ. ಇದನ್ನು ಕಂಡ ಶಿಕ್ಷಕ ಇಬ್ರಾಹಿಂ ಅವರು ಅನ್ನ ಸಾಂಬಾರು ಕಲೆಸಿ ಮಂಗಕ್ಕೆ ಉಣಬಡಿಸಿದ್ದಾರೆ. ಇಬ್ರಾಹಿಂ ಅವರ ಹತ್ತಿರದಲ್ಲೇ ಕುಳಿತು ಕೋತಿ ಅನ್ನವನ್ನು ಉಂಡಿದೆ. ಸದ್ಯ ಈ ಶಿಕ್ಷಕರು ಕೋತಿಗೆ ಶಾಲೆಯ ಬಿಸಿ ಊಟ ಮಾಡಿಸುವ ವಿಡಿಯೋ ವೈರಲ್ ಆಗಿದೆ.