Select Your Language

Notifications

webdunia
webdunia
webdunia
webdunia

ಪರಸ್ತ್ರೀಯ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾದ ವಿವಾಹಿತ?

ಆತ್ಮಹತ್ಯೆ
ಚಿಕ್ಕಬಳ್ಳಾಪುರ , ಮಂಗಳವಾರ, 20 ಡಿಸೆಂಬರ್ 2022 (09:16 IST)
ಚಿಕ್ಕಬಳ್ಳಾಪುರ : ಆತ ವಿವಾಹಿತ. ಮುದ್ದಾದ ಹೆಂಡತಿ ಇಬ್ಬರು ಮಕ್ಕಳಿದ್ರೂ, ಮತ್ತೋರ್ವ ವಿವಾಹಿತೆಯ ಬೆನ್ನು ಬಿದ್ದಿದ್ದ. ಪ್ರೀತ್ಸೆ ಪ್ರೀತ್ಸೆ ಅಂತ ಆಕೆಯನ್ನು ಕಾಡತೊಡಗಿದ್ದ.

ಆಕೆಯ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಐ ಲವ್ ಯೂ ಅಂತ ಪ್ರತಿ ದಿನ ಮೆಸೇಜ್ ಮಾಡಿ ಕಾಡಿ ಬೇಡತೊಡಗಿದ್ದ ಆದ್ರೆ ಅದೆನಾಯ್ತೋ ಏನೋ ಈಗ ಆತ ತನ್ನ ತಾಯಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆಲ್ಲಾ ಆಕೆಯೇ ಕಾರಣ ಎನ್ನುವ ಆರೋಪ ಕೇಳಿಬಂದಿದೆ.

ಅಂದಹಾಗೆ ಆತ್ಮಹತ್ಯೆಗೆ ಶರಣಾಗಿರುವವನ ಹೆಸರು ನವೀನ್ (27), ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯ ನಿವಾಸಿ. ಈತನಿಗೆ ಮದುವೆಯಾಗಿ ಹೆಂಡತಿ, ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ.

ಇತ್ತೀಚೆಗೆ ಆಕೆ. ನವೀನ್ ಕಾಟ ತಾಳಲಾರದೆ ಫೋನ್ ಬಳಸುವುದನ್ನೆ ಬಿಟ್ಟಿದ್ದಳಂತೆ, ಇದ್ರಿಂದ ನೊಂದು ನವೀನ್ ನೇಣು ಬಿಗಿದುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದ್ರೆ ಮೃತನ ಸಂಬಂಧಿಗಳು ಇದಕ್ಕೆಲ್ಲಾ ಆಕೇಯೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಹರಿದು ಮೂವರು ವಿದ್ಯಾರ್ಥಿಗಳು ದುರ್ಮರಣ!