Select Your Language

Notifications

webdunia
webdunia
webdunia
webdunia

ಜಾಮಿಯಾ ಮಸೀದಿ ವಿವಾದ ಕೆಣಕಿ ಬಿಜೆಪಿ ರಾಜಕೀಯ : ಹೆಚ್ಡಿಕೆ

webdunia
ಮಂಡ್ಯ , ಶನಿವಾರ, 24 ಡಿಸೆಂಬರ್ 2022 (11:04 IST)
ಮಂಡ್ಯ : ಜಾಮಿಯಾ ಮಸೀದಿ ವಿವಾದವನ್ನು ಕೆಣಕಿ ಬಿಜೆಪಿ ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ರಾಜಕೀಯ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಮಂಡ್ಯದ ಬೇವಿನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಧರ್ಮದ ವಿಚಾರ ಬಳಕೆ ಮಾಡಿಕೊಂಡು ರಾಜಕೀಯ ಮಾಡುವುದು ಮಾತ್ರ ಗೊತ್ತು.

ಆ ಕಾರಣಕ್ಕಾಗಿಯೇ ಅವರು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದವನ್ನು ಕೆಣಕುತ್ತಿದ್ದಾರೆ. ಜನರ ಭಾವನಾತ್ಮಕತೆ ಬಳಸಿಕೊಂಡು ರಾಜಕೀಯವಾಗಿ ಅವರು ಯಶಸ್ವಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ