Publish Date: Thu, 03 May 2018 (09:40 IST)
Updated Date: Thu, 03 May 2018 (09:41 IST)
ಬೆಂಗಳೂರು: ದೇವರಾಜು ಅರಸು ನಂತರ 5 ವರ್ಷಗಳ ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿ ನಾನೇ ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಬಿಜೆಪಿಯಂತಹ ಲೂಟಿಕೋರರ ಕೈಗೆ ಅಧಿಕಾರ ಕೊಡಬೇಡಿ. ಚೆಕ್ ಮೂಲಕ ಲಂಚ ಪಡೆದ ಸಿಎಂ ಯಡಿಯೂರಪ್ಪ ಎಂದು ವಾಗ್ದಾಳಿ ನಡೆಸಿ್ದಾರೆ.
ಅಷ್ಟೇ ಅಲ್ಲದೆ, ಬಳ್ಳಾರಿಯ ಗಣಿ ಅಕ್ರಮಗಳನ್ನು ಬಯಲಿಗೆಳೆಯಲು ಪಾದಯಾತ್ರೆ ನಡೆಸಿ ಹೋರಾಟ ಮಾಡಿದ್ದನ್ನೂ ಅವರು ಇದೇ ಸಂದರ್ಭದಲ್ಲಿ ಅವರು ನೆನಪಿಸಿಕೊಂಡರು. ಆಗ ನನ್ನ ಜತೆ ಒಬ್ಬ ಕಾನ್ ಸ್ಟೇಬಲ್ ಕೂಡಾ ಬರಲಿಲ್ಲ. ಆಗ ಪಾದಯಾತ್ರೆ ನಡೆಸಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.