Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಗುಜರಾತ್‍ ಶಾಸಕ ಜಿಗ್ನೇಶ್ ಮೇವಾನಿ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಗುಜರಾತ್‍ ಶಾಸಕ ಜಿಗ್ನೇಶ್ ಮೇವಾನಿ
ಮೈಸೂರು , ಗುರುವಾರ, 3 ಮೇ 2018 (06:09 IST)
ಮೈಸೂರು : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದ ಬಗ್ಗೆ ಹದಿನೈದು ನಿಮಿಷ ಮಾತನಾಡಲಿ ಎಂದು ಹೇಳುವ ಮೋದಿ, ತಮ್ಮ ನಾಲ್ಕು ವರ್ಷದ ಸಾಧನೆ ಏನು ಎಂದು ಜನರ ಮುಂದೆ ಇಡಲಿ. 56 ಇಂಚಿನ ಎದೆ ಇದ್ದರೆ ಸಾಲದು, ಉತ್ತಮ ಆಡಳಿತ ಕೊಡುವ ಗುಣ ಹೊಂದಿರಬೇಕು ಎಂದು ಗುಜರಾತ್‍ ಶಾಸಕ ಜಿಗ್ನೇಶ್ ಮೇವಾನಿ ಅವರು ಪ್ರಧಾನಿ ಮೋದಿ ಅವರ  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಸಂವಿಧಾನ ಉಳಿವಿಗಾಗಿ ಕರ್ನಾಟಕ ರಾಜ್ಯಮಟ್ಟದ ವೇದಿಕೆಯಿಂದ ನಡೆಯುತ್ತಿರುವ ಜನಾಂದೋಲನದಲ್ಲಿ ಭಾಗಿಯಾಗಿರುವ ಜಿಗ್ನೇಶ್ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,’ ಪ್ರಧಾನಿ ಮೋದಿ ಪ್ರಧಾನಿಯಾದ ಮೇಲೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನತೆಗೆ ತಿಳಿಸಬೇಕಿದೆ. ದೇಶ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆ, ದಲಿತರ ಮೇಲಿನ ದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಷ್ಟೆಲ್ಲಾ ಸಂಕಷ್ಟಗಳನ್ನು ಎದುರಿಸುತ್ತಿರುವ ಮೋದಿ ನನ್ನ ಜೊತೆ ನಾಲ್ಕು ನಿಮಿಷ ಚರ್ಚೆ ನಡೆಸಲಿ ಎಂದು ಹೇಳಿದ್ದಾರೆ.


‘ಗುಜರಾತ್ ಮಾಡೆಲ್ ಮೋದಿ ಎಂದು ಹೇಳುವವರಿಗೆ ನಾಚಿಕೆಯಾಗಬೇಕು. ಗುಜರಾತ್ ನ ವಿಧಾನಸೌದದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು, ಜವಾನರು ವಸತಿ ಇಲ್ಲದೆ ನೋವು ಅನುಭವಿಸುತ್ತಿದ್ದಾರೆ. ವಸತಿ ಇರಲಿ, ಅವರಿಗೆ ಸಮಾನ ವೇತನ ಕೂಡ ನೀಡುವುದಿಲ್ಲ. ಇದುವಾ ಗುಜರಾತ್ ಮಾಡೆಲ್ ‘ ಎಂದು ಅವರು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂರ ಓಲೈಸಲು ಯಡವಟ್ಟು ಮಾಡಿಕೊಂಡ ರಹೀಮ್ ಖಾನ್