Publish Date: Wed, 02 May 2018 (17:04 IST)
Updated Date: Wed, 02 May 2018 (17:06 IST)
ಮುಸ್ಲಿಂ ಮತ ಓಲೈಕೆ ಮಾಡಿಕೊಳ್ಳಲು ಹೋಗಿ ಬೀದರ್ ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ರಹೀಂ ಖಾನ್ ಯಡವಟ್ಟು ಮಾಡಿಕೊಂಡಿದ್ದಾರೆ.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೆ ಯಡವಟ್ಟು ನಡೆದಿದೆ. ಮುಸ್ಲಿಂ ವೋಟ್ ಹೆಚ್ಚು ಇರುವುದ್ರಿಂದ ನನಗೆ ಬೀದರ್ ಉತ್ತರ ಕ್ಷೇತ್ರದ ಟಿಕೆಟ್ ನೀಡಿದ್ದಾರೆ. ಇಲ್ಲದಿದ್ದರೆ ಜೀವನದಲ್ಲೆ ನನಗೆ ಟಿಕೆಟ್ ಸಿಗುತ್ತಿರಲಿಲ್ಲ. ಕೇವಲ ಮುಸ್ಲಿಂ ಮತದಾರರಿಂದ ನನ್ನ ಗೆಲುವು ಸಾಧ್ಯ. ಆದ್ದರಿಂದ ನೀವು ನನ್ನನ್ನು ಗೆಲ್ಲಿಸಬೇಕು. ನಾನು ಸೋತರೆ ಅದು ಮುಸ್ಲಿಂ ಸಮಾಜಕ್ಕೆ ಮಾಡಿದ ಅವಮಾನ ಎಂದಿದ್ದಾರೆ ರಹೀಂ ಖಾನ್. ರಹೀಂ ಖಾನ್ ಗೆ ಮುಸ್ಲೀಂ ಮತಗಳು ಮಾತ್ರ ಬೇಕಾ..?ಹಾಗಾದ್ರೆ ಬೇರೆ ಸಮಾಜದ ಮತ ಬೇಡವಾಯ್ತಾ ರಹೀಂ ಖಾನ್ ಗೆ..? ಎಂಬ ಪ್ರಶ್ನೆ ಎದುರಾಗಿದೆ.
ಮೋಘಲ್ ಗಾರ್ಡನ್ ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನೀಡಿದ ಹೇಳಿಕೆ ಬೀದರ್ ವಿಧಾನಸಭಾ ಕ್ಷೇತ್ರದಾದ್ಯಂತ ಮತದಾರರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.