Select Your Language

Notifications

webdunia
webdunia
webdunia
webdunia

ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ

ಮತದಾನದ ಬಗ್ಗೆ ಜಾಗೃತಿ ಮೂಡಿಸಿದ  ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ
ಮೈಸೂರು , ಬುಧವಾರ, 2 ಮೇ 2018 (06:52 IST)
ಮೈಸೂರು : ಬಿಗ್ ಬಾಸ್ ಸೀಸನ್ 5 ರಲ್ಲಿ ಕಾಮನ್ ಮ್ಯಾನ್ ಕಡೆಯಿಂದ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ತಮ್ಮ ಮಾತಿನ ಶೈಲಿಯಲ್ಲೆ ಫೇಮಸ್ ಆಗಿ ಸೆಲೆಬ್ರಿಟಿ ಎಂದೆನಿಸಿಕೊಂಡಿದ್ದ ನಿವೇದಿತಾ ಗೌಡ ಅವರು ಚುನಾವಣಾ ಸಂದರ್ಭದಲ್ಲಿ ಇದೀಗ ಮತದಾನದ ಕುರಿತು ಜಾಗೃತಿ ಮೂಡಿಸಲು ಹೊರಟಿದ್ದಾರೆ.


ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿರುವ ಮತ ಜಾಗೃತಿ ಕಾರ್ಯಕ್ರಮಕ್ಕೆ ರಾಯಭಾರಿಯಾಗಿರುವ ನಿವೇದಿತಾ ಗೌಡ ಅವರು ಮತದಾನ ಮಾಡಿದವರೇ ನಿಜವಾದ ಬಿಗ್‍ಬಾಸ್ ಎಂದು ಹೇಳುವ ಮೂಲಕ ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡುವ  ಜಾಗೃತಿ ವಿಡಿಯೋವೊಂದನ್ನು  ಬಿಡುಗಡೆ ಮಾಡಿದ್ದಾರೆ.


ನಾವು ನೀವು ಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಒಂದು ನಿಯಮವನ್ನು ಪಾಲಿಸಬೇಕು. ನಮ್ಮದ್ದು ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪಭ್ರುಗಳು. ಇದನ್ನು ಯಶಸ್ಸು ಗಳಿಸಲು ಪ್ರಜೆಗಳಾದ ನಮ್ಮೆಲರ ಕರ್ತವ್ಯ. ಅದಕ್ಕಾಗಿ ನಾವು ನಮ್ಮ ಮತವನ್ನು ಮತಗಟ್ಟೆಗೆ ಬಂದು ಚಲಾಯಿಸಬೇಕು. ಚುನಾವಣೆ ದಿನ ಮತಗಟ್ಟೆಗೆ ಹೋಗಿ ನಾನು ನನ್ನ ಮತವನ್ನು ಹಾಕುತ್ತಿದ್ದಿನಿ. ನೀವು ಕೂಡ ಮತಗಟ್ಟೆಗೆ ಬಂದು ನಿಮ್ಮ ಮತವನ್ನು ಚಲಾಯಿಸಿ. ನಾವು ನಮ್ಮ ನರೆಹೊರೆಯವರ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ ಹಾಗೂ ಕಡ್ಡಾಯವಾಗಿ ಅವರು ಸಹ ಮತ ಹಾಕುವಂತೆ ಮಾಡೋಣ ಎಂದು ನಿವೇದಿತಾ ಗೌಡ ವಿಡಿಯೋ ಮೂಲಕ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅನ್ನು ಅಟ್ಟಾಡಿಸಿಕೊಂಡು ಬಡಿಯುತ್ತೇವೆ. ಕಾಂಗ್ರೆಸ್ ಇದ್ದರೆ ರೋಗವಿದ್ದಂತೆ - ಸಚಿವ ಅನಂತ್ ಕುಮಾರ್ ಹೆಗಡೆ