Publish Date: Thu, 03 May 2018 (08:54 IST)
Updated Date: Thu, 03 May 2018 (08:55 IST)
ಬೆಂಗಳೂರು: ಮೊನ್ನೆಯಷ್ಟೇ ಬಿಜೆಪಿ ಸಮಾವೇಶದಲ್ಲಿ ತಮಗೆ ಸಂಸತ್ತಿನಲ್ಲಿ 15 ನಿಮಿಷ ಮಾತನಾಡುವಂತೆ ಸವಾಲು ಹಾಕಿದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಪ್ರತಿ ಸವಾಲು ಹಾಕಿದ್ದರು.
ಕಾಗದ ನೋಡದೇ 15 ನಿಮಿಷಗಳ ಕಾಲ ಕರ್ನಾಟಕ ಸರ್ಕಾರದ ಸಾಧನೆಗಳನ್ನು, ವಿಶ್ವೇಶ್ವರಯ್ಯನವರ ಹೆಸರನ್ನು 5 ಬಾರಿ ನಿರರ್ಗಳವಾಗಿ ಮಾತನಾಡಲಿ ಎಂದು ರಾಹುಲ್ ಗೆ ಪ್ರಧಾನಿ ಸವಾಲು ಹಾಕಿದ್ದರು.
ಇದೀಗ ಪ್ರತಿ ಸವಾಲು ಕೊಟ್ಟ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಟ್ವಿಟರ್ ಮೂಲಕ ಪ್ರಧಾನಿಗೆ ಹೊಸ ಸವಾಲು ಕೊಟ್ಟಿದ್ದಾರೆ. ‘ಸಾಧ್ಯವಾದರೆ 15 ನಿಮಿಷಗಳ ಕಾಲ ಬಿಎಸ್ ಯಡಿಯೂರಪ್ಪನವರ ಸರ್ಕಾರದ ಸಾಧನೆಗಳನ್ನು ಓದಿ ಹೇಳಲಿ ನೋಡೋಣ’ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.