Select Your Language

Notifications

webdunia
webdunia
webdunia
webdunia

ಸಿಎಂ ರಾಜೀನಾಮೆ ನೀಡಲಿ; ಖರ್ಗೆ ಸಿಎಂ ಆಗಲಿ ಎಂದ ಯಡಿಯೂರಪ್ಪ

ಸಿಎಂ
ಕಲಬುರಗಿ , ಬುಧವಾರ, 15 ಮೇ 2019 (14:41 IST)
ಕಲಬುರಗಿ ಉಪ ಚುನಾವಣೆಯಲ್ಲಿ ರಣ ಕಣ ತಾರಕಕ್ಕೇ ಏರುತ್ತಿದೆ. ಏತನ್ಮಧ್ಯೆ ಮಾಜಿ ಹಾಗೂ ಹಾಲಿ ಸಿಎಂಗಳ ನಡುವಿನ ವಾಕ್ಸಮರ ಹೆಚ್ಚಾಗುತ್ತಿದೆ.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು ಎಂದು ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.

ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಲಿ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಅಂತ ಮಾಡಲಿ ಎಂದು ಸವಾಲು ಹಾಕಿದ್ರು.

ಇಂದೇ ರಾಜೀನಾಮೆ ಕೊಟ್ಟು ಕುಮಾರಸ್ವಾಮಿ ಅವರ ಆಸೆ, ಕನಸನ್ನು ನನಸು ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಇದುವರೆಗೂ ಚಿಂಚೋಳಿ ಕ್ಷೇತ್ರದತ್ತ ತಿರುಗಿ ನೋಡದ ಸಿಎಂ ಈಗ ದತ್ತು ಪಡೆಯೋಕೆ ಮುಂದಾಗಿರುವುದಕ್ಕೆ ಯಡಿಯೂರಪ್ಪ ಖಂಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿಯಲ್ಲಿ ಕುರುಬರು ಸೋಲಿಸಿದ್ರಾ?