Publish Date: Thu, 07 Jun 2018 (13:01 IST)
Updated Date: Thu, 07 Jun 2018 (13:03 IST)
ಬೆಂಗಳೂರು: ಹೆಲಿಕಾಪ್ಟರ್ ಪ್ರಯಾಣದ ವೆಚ್ಚದ ಕುರಿತಾಗಿ ಹೇಳಿಕೆ ನೀಡಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ತಮಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಗಳನ್ನು ಸಿಎಂ ಎಚ್ ಡಿಕೆ ತಳ್ಳಿ ಹಾಕಿದ್ದಾರೆ.
ಇತ್ತೀಚೆಗೆ ಹೆಲಿಕಾಪ್ಟರ್ ನಲ್ಲಿ ಎರಡು ದಿನ ಪ್ರಯಾಣಿಸಿದ್ದಕ್ಕೆ 13 ಲಕ್ಷ ಬಿಲ್ ಹಾಕಿಸಿದ್ದಾರೆ ಎಂದು ಸಿಎಂ ಎಚ್ ಡಿಕೆ ಬಿಎಸ್ ವೈಗೆ ಟಾಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಯಡಿಯೂರಪ್ಪ ತಮ್ಮ ಪ್ರಯಾಣದಿಂದ ಆದ ವೆಚ್ಚವನ್ನು ತಾವೇ ತುಂಬುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಸಿಎಂ ಎಚ್ ಡಿಕೆಗೂ ಈ ಕುರಿತು ಪತ್ರ ಬರೆದಿದ್ದಾರೆ ಎಂಬ ವರದಿಯಾಗಿತ್ತು.
ಆದರೆ ಈ ವರದಿಗಳನ್ನು ನಿರಾಕರಿಸಿದ ಸಿಎಂ ಕುಮಾರಸ್ವಾಮಿ, ಬಿಎಸ್ ವೈರಿಂದ ನನಗೆ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ‘ಹೆಲಿಕಾಪ್ಟರ್ ಹಣ ಕಟ್ಟಿಸಿಕೊಳ್ಳುವಷ್ಟು ದರಿದ್ರ ನಮಗೆ ಬಂದಿಲ್ಲ. ಹಣ ದುಂದು ವೆಚ್ಚ ಮಾಡಬಾರದು ಎಂಬ ಕಾರಣಕ್ಕೆ ಹಾಗೆ ಹೇಳಿದ್ದೆ ಅಷ್ಟೆ. ದೆಹಲಿಗೆ ನಾನೂ ವಿಶೇಷ ವಿಮಾನದಲ್ಲಿ ಹೋಗಿದ್ದರೆ 40 ಲಕ್ಷ ರೂ. ವೆಚ್ಚವಾಗುತ್ತಿತ್ತು’ ಎಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.