Publish Date: Thu, 07 Jun 2018 (09:41 IST)
Updated Date: Thu, 07 Jun 2018 (09:42 IST)
ಬೆಂಗಳೂರು: ಉಡುಪಿ ಪೇಜಾವರ ಶ್ರೀಗಳು ಪ್ರಧಾನಿ ಮೋದಿ ವಿರುದ್ಧ ಮೊನ್ನೆ ನೀಡಿದ್ದ ಹೇಳಿಕೆ ಬಿಜೆಪಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಸ್ವತಃ ಶ್ರೀಗಳೇ ಸ್ಪಷ್ಟನೆ ಕೊಟ್ಟರೂ ಮುಜುಗರ ಕಡಿಮೆಯಾಗಿಲ್ಲ.
ಪ್ರಧಾನಿ ಮೋದಿ ಸರ್ಕಾರ ನಿರೀಕ್ಷಿಸಿದ ಕೆಲಸಗಳನ್ನು ಮಾಡಲು ವಿಫಲವಾಗಿದೆ ಎಂದು ಶ್ರೀಗಳು ಹೇಳಿಕೆ ನೀಡಿದ್ದು, ಬಿಜೆಪಿಗೆ ತೀವ್ರ ಮುಜುಗರವುಂಟುಮಾಡಿತ್ತು. ಇದರ ಬೆನ್ನಲ್ಲೇ ಸ್ವತಃ ಪೇಜಾವರ ಶ್ರೀ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಮೋದಿ ವಿರುದ್ಧ ನಾನು ಹೇಳಿಕೆ ನೀಡಿಲ್ಲ ಎಂದಿದ್ದರು.
ಹಾಗಿದ್ದರೂ ಬಿಜೆಪಿಯಲ್ಲಿ ಮುಜುಗರ ನಿಂತಿಲ್ಲ. ಇದೀಗ ಬಿಜೆಪಿ ನಾಯಕ ಸೊಗಡು ಶಿವಣ್ಣ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶ್ರೀಗಳಿಗೆ ಮಾಹಿತಿ ಕೊರತೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರಿಗೆ ಶೋಭಾ ಕರಂದ್ಲಾಜೆ ಅಥವಾ ಈಶ್ವರಪ್ಪ ಕೇಂದ್ರದ ಸಾಧನೆಗಳ ಬಗ್ಗೆ ವಿವರಣೆ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೂ ಶ್ರೀಗಳ ಹೇಳಿಕೆಯಿಂದ ಪಕ್ಷಕ್ಕೆ ತೀವ್ರ ಡ್ಯಾಮೇಜ್ ಆಗಿರುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.