Publish Date: Wed, 26 Aug 2020 (15:48 IST)
Updated Date: Wed, 26 Aug 2020 (16:02 IST)
ಒಂದೆಡೆ ಕೊರೊನಾ ಮತ್ತೊಂದೆಡೆ ಮಳೆಹಾನಿ ರಾಜ್ಯದ ಜನರನ್ನು ಹೈರಾಣು ಮಾಡುತ್ತಿದೆ.
ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿಬರತೊಡಗಿವೆ.
ಈ ಹಿಂದೆ ಸಚಿವ ಲಕ್ಷ್ಮಣ ಸವದಿ ದೆಹಲಿಗೆ ತೆರಳಿದ್ದಾಗಲೂ ಭಾರೀ ಚರ್ಚೆಗೆ ಕಾರಣವಾಗಿತ್ತು.
ಇದೀಗ ಸಿಎಂ ಅವರು ನಡೆಸಿರುವ ವೈಮಾನಿಕ ಸಮೀಕ್ಷೆ ವೇಳೆ ಡಿಸಿಎಂರನ್ನು ಜೊತೆಗೆ ಕರೆದುಕೊಂಡು ಹೋಗದಿರೋದಕ್ಕೆ ಹಲವು ಊಹಾಪೋಹಗಳು ಕೇಳಿಬರಲಾರಂಭಿಸಿವೆ.