Publish Date: Wed, 26 Aug 2020 (10:30 IST)
Updated Date: Wed, 26 Aug 2020 (10:32 IST)
ಇಸ್ಲಾಮಾಬಾದ್: ಭಾರತೀಯ ಕ್ರಿಕೆಟಿಗ ಧೋನಿಯನ್ನು ಹೊಗಳಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಮಾಜಿ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ರನ್ನು ದಂಡನೆಗೆ ಗುರಿಪಡಿಸಿದೆ.
ಧೋನಿಗೆ ಬಿಸಿಸಿಐ ಸರಿಯಾಗಿ ವಿದಾಯ ನೀಡಲಿಲ್ಲ ಎಂದು ಆಕ್ಷೇಪಿಸಿದ್ದ ಸಕ್ಲೇನ್ ಅವರನ್ನು ದಿಗ್ಗಜ ಕ್ರಿಕೆಟಿಗ ಎಂದು ಕೊಂಡಾಡಿದ್ದಾರೆ. ಇದೆಲ್ಲವನ್ನೂ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಿದ್ದರು. ಇದು ಪಿಸಿಬಿ ಕೆಂಗಣ್ಣಿಗೆ ಗುರಿಯಾಗಿದೆ. ಸಕ್ಲೇನ್ ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಪ್ರಮುಖ ಹುದ್ದಯಲ್ಲಿದ್ದಾರೆ. ತಮ್ಮ ದೇಶದ ಮಂಡಳಿಯ ಅತ್ಯುನ್ನತ ಹುದ್ದೆಯಲ್ಲಿದ್ದುಕೊಂಡು ಬೇರೆ ದೇಶದ ಕ್ರಿಕೆಟಿಗನ ಹೊಗಳಿರುವುದು ನಮ್ಮ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪಿಸಿಬಿ ಸಕ್ಲೇನ್ ದಂಡನಗೆ ಗುರಿಯಾಗಿಸಿದೆ.