Select Your Language

Notifications

webdunia
webdunia
webdunia
webdunia

ಭಿನ್ನಮತ ತಾರಕಕ್ಕೇರುತ್ತಿದ್ದ ಹಾಗೇ ರಾಷ್ಟ್ರ ನಿಷ್ಠೆ - ಪಕ್ಷ ನಿಷ್ಠೆ ಅತ್ಯಂತ ಶ್ರೇಷ್ಠ ಎಂದ ಸಿಟಿ ರವಿ

BJP Leader CT Ravi, Karnataka BJP Party, MLA Basanagouda Patil Yatnal,

Sampriya

ಬೆಂಗಳೂರು , ಭಾನುವಾರ, 1 ಡಿಸೆಂಬರ್ 2024 (15:35 IST)
Photo Courtesy X
ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ತಾರಕಕ್ಕೇರುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕ ಸಿಟಿ ರವಿ ಪೋಸ್ಟ್‌ ಹಾಕಿ,  ರಾಷ್ಟ್ರ ನಿಷ್ಠೆ - ಪಕ್ಷ ನಿಷ್ಠೆ ಅತ್ಯಂತ ಶ್ರೇಷ್ಠವಾದದ್ದು ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು ದಿವಂಗತ ಅನಂತ್ ಕುಮಾರ್ ಅವರ ಮಾತುಗಳನ್ನು ಸ್ಮರಿಸಿದ್ದಾರೆ.

ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆ ಅಲ್ಲ, ಜೀವನದ ಜೀವಾಳ. ರಾಷ್ಟ್ರ ನಿಷ್ಠೆ - ಪಕ್ಷ ನಿಷ್ಠೆ ಅತ್ಯಂತ ಶ್ರೇಷ್ಠವಾದದ್ದು.
ಇವತ್ತಿನ ಬಿಜೆಪಿಯ ಕೆಲವರ ಹೇಳಿಕೆ-ಪ್ರತಿಹೇಳಿಕೆ (ನಿಷ್ಠಾವಂತರ?) ಕೇಳುತ್ತಾ ಹಿರಿಯರಾದ ದಿವಂಗತ ಅನಂತ್  ಕುಮಾರ್ ಅವರು ಹೇಳುತ್ತಿದ್ದ  ಮೇಲಿನ ಮಾತು ನೆನಪಾಯಿತು ಎಂದು ಬರೆದುಕೊಂಡಿದ್ದಾರೆ.


ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯೇಂದ್ರ ಕಾಂಗ್ರೆಸ್‌ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಕಾಂಗ್ರೆಸ್‌ನೊಂದಿಗೆ ನಾನು ಒಳಒಪ್ಪಂದ ಮಾಡಿಕೊಂಡಿದ್ದಕ್ಕೆ ದಾಖಲೆಗಳಿದ್ದರೆ ತಕ್ಷಣವೇ ಅವುಗಳನ್ನು ಬಿಡುಗಡೆ ಮಾಡಿ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸವಾಲು ಹಾಕಿದರು.

ಯತ್ನಾಳ ಜೊತೆ ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ್ ಲಿಂಬಾವಳಿ, ಬಿ.ಪಿ ಹರೀಶ್, ಪ್ರತಾಪ್ ಸಿಂಹ ಅವರು ಸೇರಿಕೊಂಡಿದ್ದಾರೆ.

ವಿಜಯೇಂದ್ರ ಬಣದಲ್ಲಿ ಬಿ.ಸಿ.ಪಾಟೀಲ, ಎಂ.ಪಿ.ರೇಣುಕಚಾರ್ಯ ಸೇರಿ ಮುಂತಾದವರು ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

18 ವರ್ಷಕ್ಕೆ ಪೈಲೆಟ್‌ ಆಗಿ ಇತಿಹಾಸ ನಿರ್ಮಿಸಿದ ವಿಜಯಪುರದ ಯುವತಿ: ಈಕೆ ದೇಶದ ಅತ್ಯಂತ ಕಿರಿಯ ಪೈಲಟ್