Select Your Language

Notifications

webdunia
webdunia
webdunia
webdunia

ಅಂದು ಅಲ್ಲಾನು ಇರಲಿಲ್ಲ - ಮುಲ್ಲಾನೂ ಇರಲಿಲ್ಲ, ಇಂದು ಅದು ನಮ್ಮದು ಎನ್ನುತ್ತಿದ್ದಾರೆ: ಸಿಟಿ ರವಿ

Waqf Board, BJP Leader CT Ravi, Chief Minister Siddaramaiah

Sampriya

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (16:17 IST)
Photo Courtesy X
ಬೆಂಗಳೂರು: ಸೋಮೇಶ್ವರ ದೇಗುಲ ನಿರ್ಮಾಣವಾದಾಗ, ವಿರಕ್ತ ಪರಂಪರೆಯ ಮಠದ ಅಭ್ಯುದಯದ ಕಾಲದಲ್ಲಿ ಈ ದೇಶದಲ್ಲಿ "ಅಲ್ಲಾನು ಇರಲಿಲ್ಲ - ಮುಲ್ಲಾನೂ ಇರಲಿಲ್ಲ". ಅಂಥವರು ಇಂದು ಅದು ನಮ್ಮದು, ನಮಗೆ ಕೊಡಬೇಕು, ಎಂದು ಕೇಳುವ ದಾರ್ಷ್ಯ ಎಲ್ಲಿಂದ ಬಂತು? ಅದಕ್ಕೆ ಮೂಲ ಕಾರಣ ಕಾಂಗ್ರೆಸ್ಸಿನ ತುಷ್ಟಿಕರಣದ ನೀತಿ ಎಂದು ಬಿಜೆಪಿ ನಾಯಕ ಸಿಟಿ ರವಿ ಆಕ್ರೋಶ ಹೊರಹಾಕಿದ್ದಾರೆ.

ಅವರು ವಕ್ಫ್‌ ವಿವಾದದ ಕುರಿತಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂಬಂಧ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲೂ ಪೋಸ್ಟ್ ಹಾಕಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇವತ್ತಿನ ಕಾಲಘಟ್ಟದಲ್ಲಿ ಕಾಂಗ್ರೇಸ್ ತಾನು ಷರೀಯಾ ಪರವೇ? ಸಂವಿಧಾನದ ಪರವೇ? ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಇಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟದಲ್ಲಿ ಭಾಗವಹಿಸಿ ಕಾಂಗ್ರೆಸ್ಸಿನ ಹಿಂದೂ ವಿರೋಧಿ ಹಾಗು ಅಲ್ಪಸಂಖ್ಯಾತರ ಓಲೈಕೆಯ ನೀತಿಯನ್ನು ಖಂಡಿಸಿದೆ. ಈ ಹೋರಾಟದಲ್ಲಿ ಬಿಜೆಪಿ ನಾಯಕರು, ಬೆಂಗಳೂರು ನಗರದ ಜಿಲ್ಲೆಗಳ ಕಾರ್ಯಕರ್ತರು ಹಾಗು ಸಾರ್ವಜನಿಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಜಯಭೇರಿ: ಉ‍ಪ ಚುನಾವಣೆ ಫಲಿತಾಂಶದ ಬಗ್ಗೆ ಮಧು ಬಂಗಾರಪ್ಪ ವಿಶ್ವಾಸ