ಬೆಂಗಳೂರು: ಕರ್ನಾಟಕದಲ್ಲಿ ನಡೆದ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಗ್ರೌಂಡ್‌ನಲ್ಲಿ ಕೆಲಸ ಮಾಡಿದ್ದೇವೆ. ಎರಡು ಕ್ಷೇತ್ರದಲ್ಲಿ ವಾತಾವರಣ ಚೆನ್ನಾಗಿದೆ. ಸಮೀಕ್ಷೆಯಲ್ಲಿ ಎಲ್ಲರಿಗೂ ಒಂದೊಂದು ಸ್ಥಾನ ಕೊಟ್ಟಿದ್ದೀರಾ ಎಂದು ನಾಳೆ ಗೊತ್ತಾಗುತ್ತದೆ ಎಂದರು.
ಚನ್ನಪಟ್ಟಣದಲ್ಲಿ ಯೋಗೇಶ್ವರ್ ಲೋಕಲ್‌ನಲ್ಲಿ ಇರುವವರು ಕೆಲಸ ಮಾಡಿದ್ದಾರೆ. ಜನರು ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದಿದ್ದಕ್ಕೆ ಯಾರ ವಿರೋಧವೂ ಇಲ್ಲ. ಯೋಗೇಶ್ವರ್ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಸೋತರೂ ಗೆದ್ದರೂ ಯಾರು ಜನರ ಜೊತೆ ಇರುತ್ತಾರೋ ಅವರನ್ನ ಜನ ಗೆಲ್ಲಿಸುತ್ತಾರೆ ಎನ್ನುವ0 ವಿಶ್ವಾಸವಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಜನ ಗ್ಯಾರಂಟಿಯಾಗಿ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ಸಂಡೂರಿನಲ್ಲಿ ತುಕಾರಾಂ ಪತ್ನಿ ಕೂಡಾ ಗೆಲ್ಲುತ್ತಾರೆ ಎಂದರು.
ಉಪಚುನಾವಣೆ ರಾಜ್ಯ ರಾಜಕೀಯಕ್ಕೆ ದಿಕ್ಸೂಚಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿಕಾರಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಏನು ಚಾಳಿ ಇದೆ ಗೊತ್ತಿಲ್ಲ. 136 ಜನ ಗೆದ್ದು ಹಳೆ ಚಾಳಿನಾ ಮತ್ತೆ ತರಲು ವ್ಯವಸ್ಥೆ ಮಾಡಿದರೆ ಅವರನ್ನು ಎಷ್ಟು ದಡ್ಡರು ಎಂದು ಹೇಳಬೇಕು ಗೊತ್ತಿಲ್ಲ. 136 ಜನರನ್ನ ಈ ರಾಜ್ಯದ ಜನರು ಮತ ಹಾಕಿ ಗೆಲ್ಲಿಸಿದ್ದಾರೆ. ಬಿಜೆಪಿಯನ್ನ ಹೀನಾಯವಾಗಿ ಸೋಲಿಸಿ ಗೆಲ್ಲಿಸಿದ್ದಾರೆ ಎಂದು ಹೇಳಿದರು.