Select Your Language

Notifications

webdunia
webdunia
webdunia
webdunia

ತಂದೆಯೇ ಅಭ್ಯರ್ಥಿಯಾದರೂ ಮತದಾನವನ್ನೇ ಮಾಡದ ಸಿಪಿ ಯೋಗೇಶ್ವರ್ ಪುತ್ರಿ ನಿಶಾ: ಕಾರಣ ಶಾಕಿಂಗ್

Channapatttana By Election 2024, Congress Candidate CP Yogeshwar, CP Yogeshwar Daughter Nisha Yogeshwara,

Sampriya

ಮಂಡ್ಯ , ಬುಧವಾರ, 13 ನವೆಂಬರ್ 2024 (15:27 IST)
Photo Courtesy X
ಮಂಡ್ಯ: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬರದಿಂದ ಸಾಗುತ್ತಿದ್ದು, ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.  ಇದೀಗ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸಿಎಸ್‌ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ನಾನು ಮತದಾನ ಮಾಡಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

 ಮೊದಲಿನಿಂದಲೂ ನಿಶಾ ಯೋಗೇಶ್ವರ್, ತನ್ನ ತಂದೆ ಸಿ.ಪಿ.ಯೋಗೇಶ್ವರ್ ವಿರುದ್ಧ ಆರೋಪಗಳನ್ನು ಮಾಡುತ್ತಲ್ಲೇ ಬಂದಿದ್ದಾರೆ. ಈಚೆಗೆ ತನ್ನ ತಂದೆ ವಿರುದ್ಧ ಸಿಡಿದೆದ್ದಿದ್ದು, ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದರು. ತಂದೆಯಿಂದ ತನಗೆ ಅನ್ಯಾಯವಾಗುತ್ತಿದೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ಇದೀಗ ನಿಶಾ ಅವರು ಮೂಲಭೂತ ಹಕ್ಕುಗಳನ್ನೇ ನನ್ನಿಂದ ಕಿತ್ತುಕೊಂಡಿರುವಾಗ ಇನ್ನು ಯಾವ ಹಕ್ಕಿಗಾಗಿ ನಾನು ಮತದಾನ ಮಾಡಲಿ ಎಂದು ಅಸಮಾಧಾನ ಹೊರಹಾಕಿದ್ದದಾರೆ.

ಚಕ್ಕರೆ ಗ್ರಾಮದಲ್ಲಿ ಮತದಾನದ ಹಕ್ಕು ಹೊಂದಿರುವ ನಿಶಾ ಯೋಗೇಶ್ವರ್, ಚಕ್ಕರೆಯಲ್ಲಿ ಮತ ಚಲಾಯಿಸಬೇಕಿತ್ತು. ಆದರೆ ಸುದ್ದಿಗಾರರೊಂದಿಗೆ ಮಾತನಾಡಿರುವ ನಿಶಾ, ತಾನು ಮತದಾನ ಮಾಡಲ್ಲ. ನನ್ನ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ,. ಮೂಲಭೂತ ಹಕ್ಕುಗಳನ್ನೇ ನನ್ನಿಂದ ಕಿತ್ತುಕೊಂಡಿರುವಾಗ ಇನ್ನು ಯಾವ ಹಕ್ಕಿಗಾಗಿ ನಾನು ಮತದಾನ ಮಾಡಲಿ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡುಮೂರು ದಿನಗಳಿಂದ ನನ್ನ ಫೇಸ್ ಬುಕ್, ಇನ್ ಸ್ಟಾಗ್ರಾಂ ಪೇಜ್ ಗಳನ್ನು ಹ್ಯಾಕ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಡಿಸ್ ಕನೆಕ್ಟ್ ಮಾಡಿಸಿದ್ದಾರೆ. ನಾನು ಯಾರನ್ನೂ ಸಂಪರ್ಕ ಮಾಡಲು ಆಗುತ್ತಿಲ್ಲ ಎಂದಿದ್ದಾರೆ. ನನಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ. ಆದರೆ ಕೆಲ ವ್ಯಕ್ತಿಗಳ ಮೇಲೆ ನಂಬಿಕೆ ಇಲ್ಲ ಎಂದು ತಂದೆ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಪರ ವ್ಯಕ್ತಿಗೆ ಮತ ಹಾಕಿ, ಇಲ್ಲದಿದ್ದರೆ ಬಾಂಗ್ಲಾ, ಪಾಕ್‌ ಪರಿಸ್ಥಿತಿ ಬರುತ್ತದೆ : ಕೆಎಸ್ ಈಶ್ವರಪ್ಪ