Publish Date: Mon, 09 Jun 2025 (09:46 IST)
Updated Date: Mon, 09 Jun 2025 (09:49 IST)
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಭದ್ರತೆ ಕೊಡಲು ಕಷ್ಟ ಎಂದು ಹೇಳಿದರೆ ಕೊಡಲು ಕಷ್ಟ ಎಂದು ಡಿಸಿಪಿ ಸರ್ಕಾರಕ್ಕೆ ಬರೆದಿದ್ದ ಪತ್ರ ಈಗ ವೈರಲ್ ಆಗಿದ್ದು ಸರ್ಕಾರಕ್ಕೆ ಮುಜುಗರ ತಂದಿತ್ತಿದೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಭದ್ರತೆ ಸಮಸ್ಯೆಯಾಗುತ್ತದೆ ಎಂದು ಡಿಸಿಪಿ ಬರೆದಿದ್ದ ಪತ್ರ ಈಗ ವೈರಲ್ ಆಗಿದೆ. ಹೀಗಾಗಿ ಸರ್ಕಾರವೇ ಒತ್ತಡ ಹೇರಿ ಇಲ್ಲಿ ಕಾರ್ಯಕ್ರಮ ಆಯೋಜಿಸಿತ್ತು ಎನ್ನುವುದು ಸ್ಪಷ್ಟವಾಗಿದೆ. ಇದು ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ.
ನಿನ್ನೆಯೂ ಸಿಎಂ ಸಿದ್ದರಾಮಯ್ಯ ಭದ್ರತೆ ಒದಗಿಸುವುದು ಪೊಲೀಸರ ಕರ್ತವ್ಯ. ಇದರಲ್ಲಿ ನಮ್ಮ ತಪ್ಪೇನಿದೆ? ಸರ್ಕಾರಕ್ಕೆ ಮುಜುಗರವಾಗುವುದು ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಇದು ತೀವ್ರ ಟೀಕೆಗೂ ಒಳಗಾಗಿತ್ತು.
ಡಿಸಿಪಿ ಪತ್ರದಲ್ಲಿ ಏನಿದೆ?
ಆರ್ ಸಿಬಿಗೆ ದೇಶದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ. ಆಗ ಭದ್ರತೆ ಒದಗಿಸುವುದು ಕಷ್ಟ. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಹೀಗಾಗಿ ಕಷ್ಟವಾಗಲಿದೆ. ಆಫ್ ಲೈನ್, ಆನ್ ಲೈನ್ ಪಾಸ್ ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ವಿಧಾನಸೌಧ ಆವರಣ ಮತ್ತು ಮುಂಭಾಗದಲ್ಲಿ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಹಾಗೂ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಅಳವಡಿಸಬೇಕು. ವಿಧಾನಸೌಧ ಕಟ್ಟಡಕ್ಕೆ ಹಾನಿಯಾಗದಂತೆ ಭದ್ರತೆ ಅಳವಡಿಸಲು ಸಮಯಾವಕಾಶ ಬೇಕು ಎಂದು ಡಿಸಿಪಿ ಪತ್ರದಲ್ಲಿ ಹೇಳಿದ್ದರು.