ಬೆಡ್ ಸಿಗದೇ ನಿಮ್ಹಾನ್ಸ್ ಅಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ ಸಂಬಂಧ ಇಂದು ಕುಟುಂಬದವರು ಹಾಗೂ ಆಂಬುಲೆನ್ಸ್ ಚಾಲಕರಿಂದ ಪ್ರತಿಭಟನೆ ನಡೆಸಲಾಗಿದೆ.ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಗಿದೆ.
ಬಡವರ ಮಕ್ಕಳಿಗೆ ಒಂದು ನ್ಯಾಯ... VIP ಗಳಿಗೆ ಆಸ್ಪತ್ರೆಯಲ್ಲಿ ಬೇರೆಯದ್ದೇ ನ್ಯಾಯ ,ದೊಡ್ಡ ದೊಡ್ಡವರು ಕಾಲ್ ಮಾಡಿದ್ರೆ ಬೆಡ್ ಸಿಗುತ್ತೆ, ಟ್ರೀಟ್ಮೆಂಟ್ ಮಾಡ್ತಾರೆ.ಬಡವರು ದೂರದೂರಿನಿಂದ ಬಂದ್ರೂ ಆಸ್ಪತ್ರೆಯ ಗೇಟ್ ಒಳಗೂ ಬಿಡಲ್ಲ ಪ್ರಥಮ ಚಿಕಿತ್ಸೆಯೂ ಕೊಡಲ್ಲ.ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಇಲ್ಲ ಅಂತಾನೇ ಬಣ್ಣ ಬಣ್ಣದ ಕಾಗೆ ಹಾರಿಸ್ತಾರೆ ಅಂತ ಆಂಬ್ಯುಲೆನ್ಸ್ ಚಾಲಕರು ಕಿಡಿಕಾರಿದ್ದಾರೆ.
ಸದ್ಯ ಸ್ಥಳೀಯ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ನಿಮ್ಹಾನ್ಸ್ ವೈದ್ಯರು ಕಳಿಸಿದ್ದಾರೆ.ನಿಮಾನ್ಸ್ ಆಸ್ಪತ್ರೆ ವ್ಯಾಪ್ತಿಯ ಸಿದ್ದಾಪುರ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ರವಾನೆ ಮಾಡಿದ್ದಾರೆ.
ಸಿದ್ದಾಪುರ ಪೊಲೀಸರಿಂದ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆಗೆ ರಿಪೋರ್ಟ್ ರವಾನೆ ಮಾಡಲಾಗಿದೆ.ಈಗಗಲೇ ಎಂಎಲ್ ಸಿ ರಿಪೋರ್ಟ್ ನ್ನ ಗೋಣಿ ಬೀಡು ಪೊಲೀಸ್ ಠಾಣೆಗೆ ಸಿದ್ದಾಪುರ ಪೊಲೀಸರು ರವಾನಿಸಿದ್ದಾರೆ.ಇಂದು ಬೆಳಗ್ಗೆ ನಿಮ್ಹಾನ್ಸ್ ಅಸ್ಪತ್ರೆಗೆ ಗೋಣಿ ಬೀಡು ಪೊಲೀಸರು ಭೇಟಿ ನೀಡಿ ಆಸ್ಪತ್ರೆಯಿಂದ ಮಾಹಿತಿ ಕಲೆ ಹಾಕಲೊದ್ದಾರೆ. ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮಗುವಿನ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.ಮೃತದೇಹ ಸಿಕ್ಕ ಬಳಿಕ ಮತ್ತೆ ಆಂಬ್ಯುಲೆನ್ಸ್ ಚಾಲಕರು ಹಾಗೂ ಮಗುವಿನ ಕುಟುಂಬದಿಂದ ಪ್ರತಿಭಟನೆ ಮಾಡಲಾಗುತ್ತದೆ.