Select Your Language

Notifications

webdunia
webdunia
webdunia
webdunia

ಬ್ರ್ಯಾಂಡ್‌ ಬೆಂಗಳೂರು ಅಭಿವೃದ್ಧಿಗೆ ಪಾಲಿಕೆ ಸಾಥ್

ಬ್ರ್ಯಾಂಡ್‌ ಬೆಂಗಳೂರು ಅಭಿವೃದ್ಧಿಗೆ ಪಾಲಿಕೆ ಸಾಥ್
bangalore , ಗುರುವಾರ, 30 ನವೆಂಬರ್ 2023 (14:00 IST)
ನಾಳೆಯಿಂದ 11 ದಿನಗಳವರೆಗೆ ಬೆಂಗಳೂರು ಹಬ್ಬದ ಆಚರಣೆ ನಡೆಯಲಿದೆ.ಸರಕಾರದ ಘನತೆ ಹಾಗೂ ಬೆಂಗಳೂರಿನ ಬ್ರ್ಯಾಂಡ್‌ ಹೆಚ್ಚಿಸುವ ಸಲುವಾಗಿ ಬೆಂಗಳೂರು ಹಬ್ಬದ ಆಯೋಜನೆ ಮಾಡಲಾಗಿದೆ.ಬಿಬಿಎಂಪಿ ಸಹಯೋಗದಲ್ಲಿ ಅನ್ಬಾಕ್ಸ್ ಬೆಂಗಳೂರು ಎಂಬ ಕಾರ್ಯಕ್ರಮ ನಡೆಸಲಾಗ್ತಿದೆ .ಈ ಕಾರ್ಯಕ್ರಮವು ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ತಂತ್ರಜ್ಞಾನ, ಪರಿಸರ, ವಿನ್ಯಾಸ, ನೃತ್ಯ, ಸಂಗೀತ ಮತ್ತು ರಂಗಭೂಮಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹೊಂದಿರುತ್ತದೆ.
 
ಜಂಕ್ಷನ್‌ಗಳು, ಫ್ಲೈಓವರ್‌ಗಳು, ಉದ್ಯಾನವನಗಳು ಮತ್ತು ಮಾರುಕಟ್ಟೆಗಳಂತಹ ಪ್ರಮುಖ ಸ್ಥಳಗಳಲ್ಲಿ ಆಚರಣೆ 
ಮಾಡಲಾಗುತ್ತೆ.ನಗರದ ಎಲ್ಲಾ ಹಳೆ ಪ್ರಸಿದ್ಧ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುತ್ತೆ ಹಾಗೆ ನಗರದಲ್ಲಿನ ಹಳೆಯಕಟ್ಟಡಗಳ ಇತಿಹಾಸಗಳನ್ನು ಇದರ ಮೂಲಕ ಪರಿಚಯಿಸಲಾಗುತ್ತೆ.ಬೆಂಗಳೂರು ಹಬ್ಬಕ್ಕೆ ಮೆರಗುತಂದು ಕೊಡಲು ಸಿಲಿಕಾನ್ ಸಿಟಿಗೆ ಲಾಂಟಾನ್ ಆನೆಗಳು ಬಂದಿಳಿದಿದೆ.ವಿಧಾನಸೌದದ ಮುಂದೆ ಲಾಂಟರ್ ಆನೆಗಳನ್ನು ನಿಲ್ಲಿಸಲಾಗಿದೆ.ಆನೆಗಳ ಜೊತೆ ಸೆಲ್ಫಿ ತೆಗೆದು ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಜನ ಪುಟ್ಟ ಪುಟ್ಟ ಆನೆಗಳ ಜೊತೆ ಸೆಲ್ಫಿ ಕ್ಲಿಕಿಸಿಕೊಳ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿಸಿ ಬಟ್ಟೆ ಮಾರುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ದಾಳಿ