Daily Horoscope

Select Your Language

Notifications

webdunia
webdunia
webdunia
webdunia

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy
ಬೆಂಗಳೂರು: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ದಲಿತರ ಮೇಲಿನ ದೌರ್ಜನ್ಯ, ಕೊಲೆ ಮತ್ತಿತರ ವಿಚಾರಗಳ ಕಡೆ ಗಮನ ಹರಿಸಲಿ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಿವಿಮಾತು ಹೇಳಿದ್ದಾರೆ. 

ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರನ್ನು ನನ್ನ ಸಹೋದರ ಅಂತ ನಾನು ಭಾವಿಸಿದ್ದೇನೆ. ಇವತ್ತು ದಲಿತರಿಗೆ ಈ ರಾಜ್ಯದಲ್ಲಿ ಗರಿಷ್ಠ ಅನ್ಯಾಯ ಆಗುತ್ತಿದೆ. ಕೊಲೆಗಳೂ, ಅತ್ಯಾಚಾರಗಳೂ ಆಗುತ್ತಿವೆ.  ಸುಮಾರು 17 ಕಡೆ ಕೊಲೆಗಳಾಗಿವೆ. ಇವತ್ತಿನವರೆಗೂ ಒಂದರ ಬಗ್ಗೆಯೂ ಅವರು ತಲೆ ಕೆಡಿಸಿಕೊಂಡಿಲ್ಲ ಎಂದು ಗಮನ ಸೆಳೆದರು.
 
‘ಪ್ರಿಯಾಂಕ್ ಖರ್ಗೆಯವರಿಗೆ ಅನುಭವದ ಕೊರತೆ ಇದೆ. ನನ್ನ ಶಕ್ತಿ ಕೇವಲ ನಮ್ಮ ತಂದೆ ಅಂತ ತಿಳಿಯದಿರಿ. ನನ್ನ ಶಕ್ತಿ ನನ್ನ ಅನುಭವ, ನನ್ನ ಪ್ರಜ್ಞೆ ಎಂದು ಭಾವಿಸಬೇಕು. ಇವತ್ತು ರಾಜಕಾರಣ ಮಾಡುವುದು ಮಾತ್ರವಲ್ಲದೇ ಇವತ್ತು ಅಧಿಕಾರ ನಡೆಸುವ ಸಂದರ್ಭದಲ್ಲಿ ನನಗೆ ಸಿಕ್ಕಿರುವ ಈ ಅವಕಾಶ ಬಳಸಿಕೊಂಡು ಜನರಿಗೆ ನಾವು ಎಂಥ ಒಂದು ಆಡಳಿತವನ್ನು ಕೊಡಬಹುದು ಅನ್ನುವಂತದ್ದನ್ನೇ ಮರೆತು ಬಿಟ್ಟಿದ್ದಾರೆ’ ಎಂದು ಟೀಕಿಸಿದರು.
 
ಕೇಂದ್ರ ಸರ್ಕಾರ ಹೆದರಿಲ್ಲ
ಪ್ರಶ್ನೆಗೆ ಉತ್ತರ ನೀಡಿದ ಅವರು, ದೆಹಲಿಯಲ್ಲಿ ಹೋರಾಟಕ್ಕೆ ಕೇಂದ್ರ ಸರ್ಕಾರ ಹೆದರಿಲ್ಲ; ಅದನ್ನು ತಪ್ಪಾಗಿ ಅರ್ಥೈಸುವುದು ಬೇಕಾಗಿಲ್ಲ. ಕಾಕ್ರೋಚ್ ಪಾರ್ಟಿ ಹೆಸರಿನಲ್ಲಿ ಪ್ರದರ್ಶನಗಳು ನಡೀತಾ ಇದೆಯೋ ಈಗ ಇದು ಹೊಸದಾಗಿ ಏನೂ ಉಳಿದಿಲ್ಲ. ಹಿಂದೆ ಏನು ಪ್ರತಿಭಟನೆಗಳು ನಡೆದವೋ, ದೇಶ ವಿಚ್ಛಿದ್ರಕಾರಿ ಶಕ್ತಿಗಳು ಈ ದೇಶದ ವಿರುದ್ಧವಾಗಿ ಹಲವು ಜನರು ಏನು ಹೋರಾಟ ಮಾಡುತ್ತಿದ್ದರೋ ಅವರೆಲ್ಲರೂ ಕೂಡ ಈ ಕಾಕ್ರೋಚ್ ಪಕ್ಷದ ಮುಖಂಡರ ಜೊತೆ ಸೇರಿದ್ದಾರೆ. ವಿದ್ಯಾರ್ಥಿಗಳನ್ನೇ ಬದಿಗಿಟ್ಟು ಹೋರಾಟ ಮಾಡಿದ್ದರು. ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಅರಾಜಕತೆ ಸೃಷ್ಟಿ ಮಾಡಲು ಹೊರಟಿದ್ದರು ಎಂದು ಆಕ್ಷೇಪಿಸಿದರು. ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿತ್ತು ಎಂದು ತಿಳಿಸಿದರು.
 
ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟರು. ನಾವು ಏನೇ ಮಾಡಿದರೂ ಕೇಂದ್ರ ಸರ್ಕಾರ ತಲೆಬಾಗುತ್ತದೆ ಎಂಬ ಭಾವನೆ ಬಂದಿದೆ. ಈಗ ಚೀಫ್ ಎಲೆಕ್ಷನ್ ಕಮಿಷನರ್ ರಾಜೀನಾಮೆ ಕೊಡಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಅದು ಸಾಂವಿಧಾನಿಕ ಹುದ್ದೆ. ತಪ್ಪಾಗಿದ್ದರೆ ಕೋರ್ಟಿಗೆ ಹೋಗಬಹುದು. ನ್ಯಾಯಾಲಯಕ್ಕೆ ಹೋಗಲು ಅವರು ಸಿದ್ಧರಿಲ್ಲ ಎಂದು ದೂರಿದರು.
 
ನೀವು ಹೇಳಿದ ಫಾರಂ 7 ವಿಚಾರ ಸುಳ್ಳಾಗಿದೆ. ಯಾರದೇ ಒಂದು ಶಿಫಾರಸಿನ ಮೇಲೆ ಒಂದು ಹೆಸರನ್ನು ಕೂಡ ಚುನಾವಣಾ ಆಯೋಗ ಅವರ ಕೈ ಬಿಟ್ಟಿಲ್ಲ. ಇದುವರೆಗೂ ಕೂಡ ನನ್ನ ಹೆಸರು ತೆಗೆದಿದ್ದಾರೆ ಅಂತ ಯಾರೂ ಬಂದಿಲ್ಲ. ಇಲ್ಲಿ ಪ್ರಕಾಶ್ ರಾಜ್ ಅವರು ಇಷ್ಟು ಹೋರಾಟ ಮಾಡಿದರು; ಎಸ್.ಐ.ಆರ್ ಮಾಡಬೇಡಿ ಎನ್ನುತ್ತಾರೆ ಎಂದು ಟೀಕಿಸಿದರು. ಸತ್ತವರ ಹೆಸರು, ವರ್ಗ ಆದವರ ಹೆಸರು ಮತ್ತೆ ಇರಬೇಕು ಎನ್ನುವಿರಾ? ಎಂದು ಕೇಳಿದರು. ದೇಶದ ಪ್ರಜೆಗಳಲ್ಲದವರ ಹೆಸರು ಪಟ್ಟಿಯಲ್ಲಿತ್ತು ಎಂದು ಗಮನಕ್ಕೆ ತಂದರು.
 
ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸದಿರಿ
ನೀವು ರಾಜೀನಾಮೆ ಕೊಡಿ ಅಂತ ಕೇಳಲು ಅವರು ಮಾಡಿದ ತಪ್ಪು ಏನು ಅನ್ನೋದನ್ನು ಎತ್ತಿ ತೋರಿಸಬೇಕು ಎಂದು ಸವಾಲು ಹಾಕಿದರು. ಅದನ್ನು ತೋರಿಸಲಿಕ್ಕೆ ಇವರಿಗೆ ಯಾರಿಗೂ ಆಗುತ್ತಿಲ್ಲ ಎಂದು ವಿವರಿಸಿದರು. ನೀವು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸದಿರಿ. ನೀವು ಇಡೀ ದೇಶದಲ್ಲಿ ಈ ರೀತಿ ಒಂದು ರಾದ್ಧಾಂತ ಮಾಡಲು ಹೊರಟಿದ್ದೀರಿ; ಅದರಲ್ಲಿ ಅನೇಕರು ಈಗ ಹೊರಗಡೆಯಿಂದ ಬಂದು ಅವರು ಕೇಳುತ್ತಿದ್ದಾರೆ. ದೇಶ ಅಭದ್ರಗೊಳಿಸುವ ಕೆಲಸ ಮಾಡದಿರಿ ಎಂದು ಎಚ್ಚರಿಸಿದರು.
 
ನ್ಯಾಯಾಲಯದಲ್ಲಿ ಹೋಗಿ ನ್ಯಾಯ ಕೇಳಿ. ಅದನ್ನು ಬಿಟ್ಟು ಬೀದಿ ರಂಪ ಹಾದಿ ರಂಪ ಮಾಡುವುದು ಸರಿಯಲ್ಲ. ಭಾರತ ದೇಶಕ್ಕೆ ಕೆಟ್ಟ ಹೆಸರನ್ನು ತರಲು ಪ್ರಯತ್ನ ನಡೆದಿದೆ ಎಂದು ಆಕ್ಷೇಪಿಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಅಡಿಯಲ್ಲಿ ಕೊಟ್ಟಿರುವ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಭಾರತೀಯ ಜನತಾ ಪಕ್ಷವಾಗಲಿ ಅಥವಾ ಎನ್ ಡಿ ಎ ಸರ್ಕಾರವಾಗಲಿ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
 
ಕಾಂಗ್ರೆಸ್ ರಾಜ್ಯದಲ್ಲೂ ಉಳಿಯಲ್ಲ
ಈ ದೇಶವನ್ನು ನಡೆಸುತ್ತಿರುವುದು ಬಾಬಾ ಸಾಹೇಬರು ರಚಿಸಿದ ಸಂವಿಧಾನ. ಇಡೀ ವಿಶ್ವವೇ ಗೌರವಿಸುವ ರೀತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ದೇಶವನ್ನು ನಡೆಸುತ್ತಿದ್ದಾರೆ. ಇದನ್ನು ಕಾಂಗ್ರೆಸ್‍ನವರು ನೋಡಿ ಕಲಿಯಬೇಕು. ಅದನ್ನು ಬಿಟ್ಟು ಅಧಿಕಾರದ ಹಪಾಹಪಿಯಿಂದ ಕಾಂಗ್ರೆಸ್ ನಾಯಕತ್ವ ಸತ್ತು ಹೋಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಕಾರಣದಿಂದ ಅಹಿಂದ ನಾಯಕರಾಗಿ ಗಟ್ಟಿಯಾಗಿ ಹಿಡಿದಿದ್ದರಿಂದ ಕಾಂಗ್ರೆಸ್ ಇಲ್ಲಿ ಜೀವ ಉಳಿಸಿಕೊಂಡಿದೆ. ಅವರೂ ಈಗ ಮೂಲೆಗುಂಪಾಗಿದ್ದರಿಂದ ಇಲ್ಲೂ ಕಾಂಗ್ರೆಸ್ ಉಳಿಯಲ್ಲ ಎಂದು ತಿಳಿಸಿದರು. 
 
ರಾಹುಲ್ ಬಿಜೆಪಿ ಸ್ಟಾರ್ ಪ್ರಚಾರಕ
 ರಾಷ್ಟ್ರಮಟ್ಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರಿಗೆ ವಯಸ್ಸಾಗಿದೆ. ಇನ್ನು ರಾಹುಲ್ ಗಾಂಧಿ ಅವರಂತೂ ಬಿಜೆಪಿಯ ಸ್ಟಾರ್ ಪ್ರಚಾರಕರು. ಕಾಂಗ್ರೆಸ್‍ಗೆ ಅವರಿಂದ ಪ್ರಯೋಜನವಿಲ್ಲ. ಆ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ನಾಯಕರಿಲ್ಲದೆ ಕಾಂಗ್ರೆಸ್ ಸ್ಥಿತಿ ಚಿಂತಾಜನಕವಾಗಿದೆ. ಮುಂದಿನ ಚುನಾವಣೆವರೆಗೆ ಪಕ್ಷ ಬದುಕಿರುತ್ತೆ ಎಂಬ ಗ್ಯಾರಂಟಿಯೇ ಇಲ್ಲ. ಅಸ್ತಿತ್ವವೇ ಇಲ್ಲದೆ ಕಾಂಗ್ರೆಸ್ ಕಾಕ್ರೋಚ್ ಪಾರ್ಟಿಯಲ್ಲಿ ವಿಲೀನ ಆಗುತ್ತದೆ ಎಂದು ಅನಿಸುತ್ತಿದೆ ಎಂದು ಹೇಳಿದರು. 
 
 
ಗೃಹ ಸಚಿವರಿಗೆ ಪ್ರಜ್ಞೆ ಇರಬೇಕು
ಸ್ಟಿಂಗ್ ಆಪರೇಷನ್ ಬಗ್ಗೆ ಕಾಂಗ್ರೆಸ್‍ನವರೇ ಹೇಳುತ್ತಿರುವುದು. ಗೃಹ ಸಚಿವರಿಗೆ ಕಾನೂನಿನ ಪ್ರಜ್ಞೆ ಇರಬೇಕು. ಪೆÇಲೀಸ್ ಇಲಾಖೆಗೆ ಸ್ವಯಂಪ್ರೇರಿತ ದೂರು ದಾಖಲಿಸುವ ಅಧಿಕಾರ ಇದೆ. ಸರ್ಕಾರಕ್ಕೆ ಏನೇನು ಅಧಿಕಾರ ಇದೆ ಎಂದು ಸಚಿವರು ತಿಳಿಯಬೇಕು.  ಮಾಧ್ಯಮಗಳು ತಮ್ಮ ಕರ್ತವ್ಯ ಎಂದು ಸ್ಟಿಂಗ್ ಆಪರೇಷನ್ ಮಾಡ್ತಾರೆ. ಭ್ರμÁ್ಟಚಾರ ಮಾಡದೇ ಇದ್ದರೆ ಯಾರಿಗೂ ಭಯ ಇರಲ್ಲ. ಕಾಂಗ್ರೆಸ್‍ನವರಲ್ಲಿ ಹುಳುಕು ಇರುವುದರಿಂದಲೇ ಭಯ ಪಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿ ನೋಡಿಕೊಂಡರಂತೆ ಅಂದ ಹಾಗಿದೆ ಎಂದರು. 
 
ಸಿಎಂ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾರೆ
ಸ್ಟಿಂಗ್ ಆಪರೇಷನ್ ಬಗ್ಗೆ ಮುಖ್ಯಮಂತ್ರಿಗಳೇ ಯಾಕೆ ಹರಿಬಿಟ್ಟರು. ಅವರು ಕ್ರಮಕೈಗೊಳ್ಳಬೇಕಿತ್ತು. ಅವರು ತಮ್ಮದೇ ಪಕ್ಷದ ಶಾಸಕರು ಹಾಗೂ ಸಚಿವರನ್ನು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾರೆ. ಇದು ಕಾಂಗ್ರೆಸ್ ನ ಹಳೆಯ ನೀತಿ ಎಂದು ವಿವರಿಸಿದರು. 
 
ಮಹಿಷಿ ದಸರಾವನ್ನು ಕೆಲವರು ಪ್ರಚಾರಕ್ಕಾಗಿ ಮಾಡುತ್ತಾರೆ. ಸರ್ಕಾರಗಳು ಅವರನ್ನು ತಡೆಯಬಹುದು. ಇಲ್ಲದಿದ್ದರೆ ಪದ್ಧತಿ ಆಗುತ್ತದೆ. ಮುಂದಿನ ದಿನ ಸಾಮಾಜಿಕವಾಗಿ ತೊಂದರೆ ಆಗಬಹುದು ಎಂಬುದನ್ನು ತಿಳಿಯಬೇಕು. ಇದರ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು