Publish Date: Wed, 12 Oct 2022 (10:11 IST)
Updated Date: Wed, 12 Oct 2022 (12:13 IST)
ಬೆಂಗಳೂರು : ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ನಗರದ 14 ಕಡೆಗಳಲ್ಲಿ ದಾಳಿ ನಡೆದಿದೆ.
ಐವರು ಎಸಿಪಿ, 14 ಇನ್ಸ್ಪೆಕ್ಟರ್ ಸೇರಿ 60ಕ್ಕೂ ಹೆಚ್ಚು ಪೊಲೀಸರ ತಂಡದಿಂದ ಬೆಂಗಳೂರಿನ ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ ಸೇರಿದಂತೆ ನಗರದ ಹಲವೆಡೆ ದಾಳಿ ನಡೆದಿದೆ.
ಹೂಡಿಕೆದಾರರಿಗೆ ವಾಪಸ್ಸು ಹಣ ನೀಡದೇ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಬ್ಯಾಂಕ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶುಶೃತಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ ಮೂರ್ತಿಯನ್ನು ಬಂಧಿಸಲಾಗಿತು.