Select Your Language

Notifications

webdunia
webdunia
webdunia
webdunia

ಭಾರೀ ಮಳೆ : ಇಂದು, ನಾಳೆ ಯೆಲ್ಲೋ ಅಲರ್ಟ್!

ಭಾರೀ ಮಳೆ : ಇಂದು, ನಾಳೆ ಯೆಲ್ಲೋ ಅಲರ್ಟ್!
ಬೆಂಗಳೂರು , ಮಂಗಳವಾರ, 11 ಅಕ್ಟೋಬರ್ 2022 (10:11 IST)
ಬೆಂಗಳೂರು : ರಾಜಧಾನಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ವರುಣಾರ್ಭಟ ಮುಂದುವರಿದಿದೆ. ನಗರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ನಗರದಲ್ಲಿ ನಿನ್ನೆ ತಡರಾತ್ರಿಯಿಂದ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಕೂಡ ಭಾರೀ ಮಳೆಯಾಯಿತು. ಇನ್ನೂ ಎರಡು-ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ ಸೇರಿದಂತೆ ನಗರದ ವಿವಿಧೆಡೆ ಮಳೆಯಾಗಿದ್ದು, ಜನ ಪರದಾಡುವಂತಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ, ಹತ್ಯೆಯಾದ ಪ್ರಿಯಕರ!