Select Your Language

Notifications

webdunia
webdunia
webdunia
webdunia

ಪ್ರತಿಷ್ಠಿತ ಹೊಟೆಲ್ ನಲ್ಲಿ ಊಟ ಮಾಡುವಾಗ‌ ಸಿಕ್ತು ಜಿರಳೆ

cockroach
ಪ್ರತಿಷ್ಠಿತ ಹೊಟೆಲ್ ನಲ್ಲಿ ಊಟ ಮಾಡುವಾಗ‌ ಊಟದಲ್ಲಿ ಜಿರಳೆ ಕಂಡು ವಕೀಲೆ ಬೆಚ್ಚಿಬಿದ್ದಿದ್ದಾರೆ.ಜಿರಳೆ ಒಂದು ಕಡೆಯಾದ್ರೆ ಹೊಟೆಲ್ ನ ಕಿಚನ್ ಕಂಡರೆ ವಾಕರಿಗೆ ಬರೋದು ಗ್ಯಾರಂಟಿ.ಈ ಹೊಟೆಲ್‌ನಲ್ಲಿ ಪಾತ್ರೆ, ಪಗಡೆ ತೊಳೆದು ಎಷ್ಟು ದಿನಗಳು ಆಯ್ತು ಎನ್ನುವ ಪ್ರಶ್ನೆ ಮೂಡಿದೆ.ಪ್ರತಿಷ್ಠಿತ ಕ್ಯಾಪಿಟಲ್ ಹೊಟೆಲ್ ನ ಊಟದಲ್ಲಿ ಜಿರಳೆ ಪತ್ತೆಯಾಯ್ತು.

ನಿನ್ನೆ  ಸಂಜೆ ಘಟನೆ ನಡೆದಿದೆ.ಕ್ಯಾಪಿಟಲ್ ಹೊಟೆಲ್ ಗೆ‌ ಊಟಕ್ಕೆಂದು ಹೈಕೋರ್ಟ್ ವಕೀಲೆ ಶೀಲಾ ಹೋಗಿದ್ರು.ಈ ವೇಳೆ ಪನ್ನೀರ್ ಗ್ರೇವಿ ರೋಟಿ ಆರ್ಡರ್ ಮಾಡಿದ್ರು. ಒಂದೆರಡು ತುತ್ತು ತಿನ್ನುತ್ತಿದ್ದಂತೆ ಪನ್ನೀರ್ ಗ್ರೇವಿಯಲ್ಲಿ ಜಿರಳೆ ಪತ್ತೆಯಾಗಿದೆ.ಜಿರಳೆ ಕಂಡು ಹೊಟೆಲ್ ಸಿಬ್ಬಂದಿಗೆ ಪ್ರಶ್ನಿಸಿ  ವಕೀಲೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಉಡಾಫೆ ಉತ್ತರ ನೀಡಿ ಬೇರೆ ಊಟ ನೀಡುವುದಾಗಿ ಸಿಬ್ಬಂದಿ ಹೇಳಿದ್ದಾರೆ.ಆಗ ಕಿಚನ್ ಗೆ ನುಗ್ಗಿ ವಕೀಲೆ ವಿಡಿಯೋ ಚಿತ್ರಿಕರಿಸಿದ್ದಾರೆ.ಕಿಚನ್ ಕಂಡು ರಸ್ತೆಬದಿ ಹೊಟೆಲ್ ಗಳೆ ಲೇಸು ಎಂದು ವಕೀಲೆ ಹೇಳಿದ್ದು,ಘಟನೆ ಸಂಬಂದ ವಿಧಾನಸೌಧ ಠಾಣೆಗೆ ವಕೀಲೆ ಯಿಂದ ದೂರು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನ ಮೇಲೆ ಪುಂಡಾಟ