ಭಾನುವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲು ಅಭಿಮಾನಿಗಳ ದಂಡೇ ನಗರಕ್ಕೆ ಆಗಮಿಸುತ್ತಿದ್ದು, ಹೋಟೆಲ್ ರೂಮ್‌ಗಳು ಹಾಗೂ ವಿಮಾನದ ಟಿಕೆಟ್ ದರ ಗಗನಕ್ಕೆ ಮುಟ್ಟಿದೆ. ವಿಶ್ವಕಪ್ ಫೈನಲ್ ನ ಜ್ವರವು ಉತ್ತುಂಗಕ್ಕೆ ತಲುಪಿದ್ದು, ನಗರದ ಪ್ರಮುಖ ಪಂಚತಾರಾ ಹೋಟೆಲ್‌ಗಳಲ್ಲಿ ಪಂದ್ಯದ ರಾತ್ರಿಯ ಹೋಟೆಲ್ ರೂಮ್ ಬಾಡಿಗೆ ದರಗಳು 12 ಲಕ್ಷಕ್ಕೆ ಮುಟ್ಟಿವೆ. ಇತರ ಹೋಟೆಲ್‌ಗಳು ಸಹ ದರಗಳನ್ನು ಐದರಿಂದ ಏಳು ಪಟ್ಟು ಹೆಚ್ಚಿಸಿವೆ. ವಿಶ್ವಕಪ್ ಫೈನಲ್‌ಗೆ ಭಾರತದಿಂದ ಮಾತ್ರವಲ್ಲದೆ ದುಬೈ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ವಿದೇಶಗಳಿಂದಲೂ ಜನರು ಬರುತ್ತಿದ್ದಾರೆ ಎಂದು ಗುಜರಾತ್ ನ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ನರೇಂದ್ರ ಸೋಮಾನಿ ಹೇಳಿದ್ದಾರೆ.
ಅಹಮದಾಬಾದ್‌ನ ಸ್ಟಾರ್ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ 5,000 ಕೊಠಡಿಗಳಿವೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1.20 ಲಕ್ಷಕ್ಕೂ ಹೆಚ್ಚು ಅಸನಗಳ ಸಾಮರ್ಥ್ಯವಿದ್ದು, 30,000ರಿಂದ 40,000 ಜನರು ವಿದೇಶಗಳಿಂದ ಬರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.ಹೋಟೆಲ್ ಕೊಠಡಿಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅವುಗಳ ದರವೂ ಹೆಚ್ಚುತ್ತಿದೆ ಎಂದ ಅವರು, ಈ ಹಿಂದೆ ಅತ್ಯಲ್ಪ ದರದಲ್ಲಿ ಲಭ್ಯವಿದ್ದ ಕೊಠಡಿಗಳ ದರವೂ 750,000ದಿಂದ 71.25ಲಕ್ಷಕ್ಕೆ ಏರಿಕೆಯಾಗಿದೆ. ಅಹಮದಾಬಾದ್‌ನಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಪಟ್ಟಣಗಳಲ್ಲಿಯೂ ಪಂದ್ಯದ ದಿನ ಹತ್ತಿರ ಬರುತ್ತಿದ್ದಂತೆ ಹೋಟೆಲ್ ರೂಮ್ ಬಾಡಿಗೆ ಬೆಲೆಗಳು ಹೆಚ್ಚಾಗಿವೆ ಎಂದೂ ಅವರು ಹೇಳಿದ್ದಾರೆ.