Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಕೆಲ ಪ್ರದೇಶದಲ್ಲಿಂದು ವಿದ್ಯುತ್ ವ್ಯತ್ಯಯ

ಬೆಂಗಳೂರಿನ ಕೆಲ ಪ್ರದೇಶದಲ್ಲಿಂದು ವಿದ್ಯುತ್ ವ್ಯತ್ಯಯ
bangalore , ಶನಿವಾರ, 18 ನವೆಂಬರ್ 2023 (15:45 IST)
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು ನಗರದಲ್ಲಿ ಈ ವಾರಾಂತ್ಯದಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

ಸಾಮಾಜ್ಯವಾಗಿ ಬೆಳಗ್ಗೆ 10 ಗಂಟೆಯ ನಂತರ ಈ ನಿರ್ವಹಣಾ ಯೋಜನೆಗಳ ಕೆಲಸ ಆರಂಭವಾಗಲಿದೆ ಲಕ್ಕೂರು ತೋಟ, ಸುಗ್ಗಯ್ಯನಪಾಳ್ಯ, ಮಾದೇನಹಳ್ಳಿ, ನಿಜಗಲ್ ಕೆಂಪೋಹಳ್ಳಿ, ರಾಯರಪಾಳ್ಯ, ಕಸಬಾಣಿಜಗಲ್, ಹಳೇನಿಜಗಲ್ ಬಡವಣೆ, ಚನ್ನೋಹಳ್ಳಿ, ಇಮಾಚೇನಹಳ್ಳಿ, ಕರಿಮನ್ನೆ, ನರಸೀಪುರ, ದೇವರಹಟ್ಟಿಪಾಳ್ಯ, ಸಾಲಹಟ್ಟಿ, ನರಸೀಪುರ, ಹೆಗ್ಗುಂದದ, ಜಿ ಪಾಲಗೌಡ, ಹಾಲೇನಹಳ್ಳಿ, ಜಾಜೂರ್, ಲಕ್ಷ್ಮೀಪುರ, ಮಾಕೇನಹಳ್ಳಿ, ಹಳೆ ನಿಜಗಲ್, ಹೊಸ ನಿಜಗಲ್, ದೇವರಹೊಸಹಳ್ಳಿ, ಎಸ್‌ಎಸ್ ಹೈಟೆಕ್ ಆಸ್ಪತ್ರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಶೇಖರಪ್ಪ ನಗರ, ಗುಜ್ಜರಿ ಲೈನ್ ಸೇರಿದಂತೆ ಹಲವೆಡೆ ವಿದ್ಯುತ್ ಕಡಿತಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು, ನಾಳೆ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆ