Publish Date: Tue, 21 Apr 2020 (18:43 IST)
Updated Date: Tue, 21 Apr 2020 (18:44 IST)
ಕೊರೊನಾ ವಾರಿಯರ್ಸ್ ಹಾಗೂ ಪೊಲೀಸರು, ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಪಾದರಾಯನಪುರದಲ್ಲೇ ಈ ಹಿಂದೆ ಇದ್ದ ತಬ್ಲಿಘಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿರುವ ಸುಬಾನಿ ಮಸೀದಿಯಲ್ಲಿ ತಬ್ಲಿಘಿಗಳು ತಂಗಿದ್ದ ಕಾರಣಕ್ಕೆ ಅವರ ವಿರುದ್ಧ ಕೇಸ್ ದಾಖಲಾಗಿದೆ.
19 ತಬ್ಲಿಘಿಗಳು ವಿವಿಧ ದೇಶಗಳಿಂದ ಬಂದಿದ್ದರು. ಬೆಂಗಳೂರಿನಲ್ಲಿದ್ದು ಧಾರ್ಮಿಕ ಪ್ರಚಾರ ನಡೆಸಿದ್ದರು. ಇವರಿಗೆ ಸ್ಥಳೀಯ ಟ್ರಸ್ಟ್ ವೊಂದು ಸಹಾಯ ಮಾಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಪ್ರವಾಸಿ ವಿಸಾ ಮೇಲೆ ಬಂದಿದ್ದ ತಬ್ಲಿಘಿಗಳ ವಿರುದ್ಧ ಈಗ ಕಾನೂನು ಕ್ರಮಕ್ಕೆ ಸರಕಾರ ಮುಂದಾಗಿದೆ.