Publish Date: Mon, 20 Apr 2020 (19:53 IST)
Updated Date: Mon, 20 Apr 2020 (19:56 IST)
ಕೊರೊನಾ ವಾರಿಯರ್ಸ್ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆಯ ಹಿಂದೆ ಕಾಂಗ್ರೆಸ್ ಶಾಸಕನ ಕೈವಾಡವಿದೆ.
ಹೀಗಂತ ಕೇಂದ್ರ ಸಚಿವರೊಬ್ಬರು ಆರೋಪ ಮಾಡಿದ್ದಾರೆ.
ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕುಮ್ಮಕ್ಕಿನಿಂದಲೇ ಪಾದರಾಯನಪುರದಲ್ಲಿ ಗಲಭೆ ನಡೆದಿದೆ. ಹೀಗಂತ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ದೂರಿದ್ದಾರೆ.
ಶಾಸಕರಾಗಿರುವ ಜಮೀರ್ ತಮ್ಮ ಹುದ್ದೆಯ ಘನತೆ, ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ. ಈ ಘಟನೆ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸರಕಾರ ಮುಂದಾಗಿರುವುದು ಸ್ವಾಗತಾರ್ಹ ವಿಷಯ ಎಂದಿದ್ದಾರೆ.
ಪಾದರಾಯನಪುರ ಗಲಭೆಯನ್ನು ಸುಮ್ಮನೆ ಬಿಟ್ಟರೆ ಇದು ಕೊರೊನಾ ವೈರಸ್ ಗಿಂತಲೂ ಹೆಚ್ಚು ವೇಗದಲ್ಲಿ ಹರಡಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.