Select Your Language

Notifications

webdunia
webdunia
webdunia
webdunia

ಆನ್‍ಲೈನ್ ಅಪ್ಲಿಕೇಷನ್ ಮೂಲಕ ಕೆಲಸ ಹುಡುಕುತ್ತಿರುವ ಯುವತಿಯರೇ ಎಚ್ಚರ

ಆನ್‍ಲೈನ್ ಅಪ್ಲಿಕೇಷನ್ ಮೂಲಕ ಕೆಲಸ ಹುಡುಕುತ್ತಿರುವ ಯುವತಿಯರೇ ಎಚ್ಚರ
ಬೆಂಗಳೂರು , ಸೋಮವಾರ, 11 ಫೆಬ್ರವರಿ 2019 (06:26 IST)
ಬೆಂಗಳೂರು : ಕಾಲ್ ಸೆಂಟರ್ ಕೆಲಸ, ಕೈತುಂಬ ವೇತನ ಕೊಡುವುದಾಗಿ ಸುಳ್ಳು ಹೇಳಿ ಯುವಕರಿಗೆ ಪ್ರಚೋದನೆ ಮಾಡಿ ಅವರ ಜೊತೆ ವೇಶ್ಯಾವಾಟಿಕೆಗೆ  ನಡೆಸುವಂತೆ ಯುವತಿಯರಿಗೆ ಟಾರ್ಚರ್ ನೀಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.


ಶ್ರವಣಬೆಳಗೊಳ ಮೂಲದ ದಿನೇಶ್, ಕೆ.ಆರ್ ಪೇಟೆ ಮೂಲದ ಪ್ರಜ್ವಲ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಇವರು Locanto ಎನ್ನುವ ಆನ್‍ಲೈನ್ ಅಪ್ಲಿಕೇಷನ್ ಮೂಲಕ ಯುವತಿಯರಿಗೆ ಕೆಲಸ ಕೊಡುಸುವುದಾಗಿ ಹೇಳಿ ನಂತರ ಯುವಕರಿಗೆ ಕಾಲ್ ಮಾಡಿ ಲೈಂಗಿಕತೆಗೆ ಪ್ರಚೋದನೆ ಮಾಡುವ ಕೆಲಸವನ್ನು ಮಾಡುವಂತೆ ಆರೋಪಿಗಳು ಯುವತಿಯರಿಗೆ ಟಾರ್ಚರ್ ಮಾಡುತ್ತಿದ್ದರು. ಇದಕ್ಕೆ ಒಪ್ಪದ ಯುವತಿಯರಿಗೆ ಕಿರುಕುಳ ನೀಡಿ, ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್‍ನಲ್ಲಿರುವ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಕೂಡಿಹಾಕಲಾಗಿತ್ತು.


ಈ ಘಟನೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಮೂರು ಜನ ಯುವತಿಯರನ್ನು ರಕ್ಷಿಸಿದ್ದಾರೆ.  ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೇದಿಕೆ ಮೇಲೆಯೇ ಕಾಂಗ್ರೆಸ್ ಪಕ್ಷದ ಶಾಸಕರ ಎದೆಗೆ ಗುಂಡಿಟ್ಟು ಕೊಂದ ದುಷ್ಕರ್ಮಿಗಳು