ವಾಸ್ತುಶಾಸ್ತ್ರದ ಪ್ರಕಾರ ಮನೆಯ ಗೋಡೆಗೆ ಯಾವ ಬಣ್ಣ ಹಚ್ಚಬೇಕಂತೆ ಗೊತ್ತಾ?

ಭಾನುವಾರ, 10 ಫೆಬ್ರವರಿ 2019 (10:29 IST)
ಬೆಂಗಳೂರು : ಮನೆ ಕಟ್ಟುವಾಗ ವಾಸ್ತು ನೋಡುತ್ತೇವೆ. ಯಾಕೆಂದರೆ ವಾಸ್ತು ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಅದೇರೀತಿ ವಾಸ್ತುಶಾಸ್ತ್ರದಲ್ಲಿ ಮನೆಗೆ ಯಾವ ಬಣ್ಣ ಹಾಕಿದರೆ ಉತ್ತಮ ಎಂಬುದನ್ನು ತಿಳಿಸಿದ್ದಾರೆ. ಯಾಕೆಂದರೆ ಮನೆಗೆ ಬಳಿಯುವ ಬಣ್ಣ ನಮ್ಮ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ.


ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಕೋಣೆಗೆ ಹಳದಿ ಬಣ್ಣ ಬಳಿದರೆ ಉತ್ತಮವಂತೆ. ಯಾಕೆಂದರೆ ಹಳದಿ ಬಣ್ಣ ಮನಸ್ಸಿಗೆ ಸುಖ, ಶಾಂತಿ ನೀಡುತ್ತದೆ. ಹಾಗೇ ಮನೆಯ ಉತ್ತರ ದಿಕ್ಕು ಆರ್ಥಿಕ ಸಮೃದ್ಧಿಯ ಸಂಕೇತವಾಗಿದೆ. ಧನ ಲಾಭಕ್ಕಾಗಿ ಮನೆಯ ಉತ್ತರ ದಿಕ್ಕಿಗೆ ಹಸಿರು ಬಣ್ಣವನ್ನು ಹಚ್ಚಬೇಕಂತೆ. ಮನೆಯ ಬಾಗಿಲು, ಕಿಟಕಿಗೆ ಯಾವಾಗ್ಲೂ ಗಾಢವಾದ ಬಣ್ಣವನ್ನು ಹಚ್ಚಿದರೆ ಉತ್ತಮ ಎನ್ನಲಾಗಿದೆ.


ಈಶಾನ್ಯ ದಿಕ್ಕಿಗೆ ತಿಳಿ ನೀಲಿ ಬಣ್ಣವನ್ನು ಹಚ್ಚಿ. ಪೂರ್ವ ದಿಕ್ಕಿನ ಗೋಡೆಗೆ ಬಿಳಿ ಬಣ್ಣವನ್ನು ಹಚ್ಚಿ. ಆಗ್ನೇಯ ದಿಕ್ಕಿಗೆ ಗುಲಾಬಿ, ಬೆಳ್ಳಿ ಬಣ್ಣವನ್ನು ಹಚ್ಚಿ. ಉತ್ತರ ದಿಕ್ಕಿಗೆ ಹಸಿರು ಬಣ್ಣವನ್ನು ಹಚ್ಚಿ. ವಾಯುವ್ಯ ದಿಕ್ಕಿಗೆ ಬಿಳಿ, ತಿಳಿ ಬೂದಿ ಬಣ್ಣ ಹಚ್ಚಿ. ದಕ್ಷಿಣ ದಿಕ್ಕಿಗೆ ಕೆಂಪು ಮತ್ತು ಹಳದಿ ಬಣ್ಣವನ್ನು ಹಚ್ಚಿ. ಪಶ್ಚಿಮ ದಿಕ್ಕಿಗೆ ನೀಲಿ, ಬಿಳಿ ಬಣ್ಣವನ್ನು ಹಚ್ಚಬೇಕು ಎಂದು ತಿಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?