Publish Date: Wed, 01 May 2019 (18:41 IST)
Updated Date: Wed, 01 May 2019 (18:44 IST)
ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಟೆಂಪಲ್ ರನ್ ಮಾಡುತ್ತಿದ್ದಾರೆ.
ಬಂಜಾರಾ ಸಮುದಾಯದ ಮತಬೇಟೆಗಾಗಿ ಡಾ.ರಾಮರಾವ್ ಮಹಾರಾಜರ ಮೊರೆ ಹೋಗಿದ್ದಾರೆ ರಾಠೋಡ್. ಮಹಾರಾಷ್ಟ್ರದ ಪೌರಾದೇವಿ ಪೀಠದ ಡಾ.ರಾಮರಾವ್ ಮಹಾರಾಜರನ್ನು ಭೇಟಿ ಮಾಡಿದ್ದಾರೆ. ಬಂಜಾರಾ ಸಮುದಾಯದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಡಾ.ರಾಮರಾವ್ ಮಹಾರಾಜರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇಂದು ಬೆಳಗ್ಗೆ 7.30ರ ಸುಮಾರಿಗೆ ರಾಮರಾವ್ ಮಹಾರಾಜರ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ ಸುಭಾಷ್ ರಾಠೋಡ್. ಚಿಂಚೋಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರಾ ಸಮುದಾಯ ಮತದಾರರಿರುವ ಹಿನ್ನೆಲೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಸುಭಾಷ್ ರಾಠೋಡ್. ರಾಠೋಡ್ ಗೆಲುವಿಗೆ ಕೈ ಪಡೆ ಸನ್ನದ್ಧವಾಗಿ ಕಾರ್ಯತಂತ್ರ ರೂಪಿಸುತ್ತಿದೆ.
Jagadeesh
Publish Date: Wed, 01 May 2019 (18:41 IST)
Updated Date: Wed, 01 May 2019 (18:44 IST)