ರಾಜ್ಯದ ಜನತೆಯು ಕಾಯುತ್ತಿದ್ದ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು, ಇದೀಗ ನಾಳೆ ರಾಜ್ಯ ಸರ್ಕಾರದ ಬಜೆಟ್ ಮಂಡಿಸಲಾಗುತ್ತದೆ. ಈ ಹಿನ್ನೆಲೆ ಸಕಲ ಸಿದ್ದತೆಗಳನ್ನು ರಾಜ್ಯ ಸರ್ಕಾರವು ಮಾಡಿಕೊಂಡಿದೆ. ಈ ವೇಳೆ ಬಜೆಟ್ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 2022ರ ಬಜೆಟ್ ಮಂಡನೆಯಲ್ಲಿ ಬರಿ ಘೋಷಣೆ, ಭರವಸೆ, ಭಾಷಣದ ಬಜೆಟ್ ಅಷ್ಟೇ ಆಗಿತ್ತು. ಡಬ್ಬಲ್ ಇಂಜಿನ್ ಸರ್ಕಾರ ಹೈ ಸ್ಪೀಡ್ ಆಗಿ ರಾಜ್ಯನ ತೆಗೆದುಕೊಂಡು ಹೋಗುತ್ತದೆ ಎಂದುಕೊಂಡಿದ್ದೆವು. ಗಾಡಿ ಸ್ಟಾಟ್ ಆಯ್ತು, ಹೊಗೆ ಬಂತು ಹೊರತು ಮುಂದಕ್ಕೆ ಹೋಗಲೇ ಇಲ್ಲ ಎಂದು ವ್ಯಂಗ್ಯವಾಡಿದ್ರು. ಬಜೆಟ್ ಪುಸ್ತಕವನ್ನು ಬೊಮ್ಮಯಿ ಓದಿ, ರಾಜ್ಯದ ಜನರಿಗೆ ಮಾತು ಕೊಟ್ಟಿದ್ದರು. ಬಜೆಟ್ ಪಾಸ್ ಮಾಡಿ ಅದರಲ್ಲಿ ಎಷ್ಟು ಅನುಷ್ಟಾನಕ್ಕೆ ತಂದರು ಎಂದು ಕಳೆದ ಬಜೆಟ್ ಕುರಿತು ಟಿಕೀಸಿದರು. ಬಸವರಾಜ್ ಬೊಮ್ಮಾಯಿ ಅಂದ್ರೆ ಬಸವಣ್ಣ ಇಂದ್ದ ಹಾಗೆ ಅಲ್ವ.ಅವ್ರು ಎಷ್ಟು ನುಡಿದಂತೆ ನಡೆದಿದ್ದಾರೆ. ಬಜೆಟ್ ನಲ್ಲಿ ಅನುಷ್ಟಾನಕ್ಕೆ ತಂದ ಬಗ್ಗೆ ಇಂದು ಸಂಜೆ ಒಳಗೆ ರಿಪೋರ್ಟ್ ಕಾರ್ಡ್ ಕೊಡಬೇಕು.ಇಲ್ಲ ಅಂದ್ರೆ ಈ ಬಾರಿ ಮಾಡೋ ಬಜೆಟ್ ಕೇವಲ ಘೋಷಣೆ ಆಗುತ್ತೆ ಅಷ್ಟೇ