Select Your Language

Notifications

webdunia
webdunia
webdunia
webdunia

ಸಿಎಂ ಆಗೋ ಇಂಗಿತ ವ್ಯಕ್ತಪಡಿಸಿದ ಡಾ.ಜಿ.ಪರಮೇಶ್ವರ್​​

Dr. G. Parameshwar expressed his wish to become CM
bangalore , ಗುರುವಾರ, 16 ಫೆಬ್ರವರಿ 2023 (18:32 IST)
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನದ ಮೇಲೆ ನಾಯಕರ ಕಣ್ಣು ಹೆಚ್ಚಾಗುತ್ತಿದೆ. ಮೊದಲೇ ಸಿದ್ದು ಮತ್ತು ಡಿಕೆಶಿ ಮುಖ್ಯಮಂತ್ರಿ ಕುರ್ಚಿಗಾಗಿ ಹೊಡೆದಾಡುತ್ತಿದ್ದು, ತಮ್ಮ ಮುಖ್ಯಮಂತ್ರಿ ಆಸೆಯನ್ನ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಕುರ್ಚಿ ಪೈಪೋಟಿಗೆ ಡಾ. ಜಿ ಪರಮೇಶ್ವರ್ ಕೂಡ ಮುಗಿಬಿದ್ದಿದ್ದಾರೆ. ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೂಡ ಸಿಎಂ ಆಗೋ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆಯೇ ಹೊಸ ಬಾಂಬ್ ಸಿಡಿಸಿದ ಪರಮೇಶ್ವರ್ ನಮ್ಮ ಪಕ್ಷದಲ್ಲಿ 10 ಜನರಿಗೆ ಸಿಎಂ ಸ್ಥಾನದ ಮೇಲೆ ಆಸೆಯಿದೆಯೆಂದಿದ್ದಾರೆ. ಆ 10 ಜನರಲ್ಲಿ ನಾನು ಕೂಡ ಒಬ್ಬ ಎಂದು ಡಿಕೆಶಿ ಮತ್ತು ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಸೆ ವ್ಯಕ್ತಪಡಿಸಿ ನಂತರ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬರದ ಪ್ರಚಾರ ಮಾಡ್ತಿರುವ ಸ್ವರೂಪ್, ಭವಾನಿ