Select Your Language

Notifications

webdunia
webdunia
webdunia
webdunia

ಬಜೆಟ್: ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಸಿಎಂ

ಬಜೆಟ್: ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಸಿಎಂ
ರಾಮನಗರ , ಸೋಮವಾರ, 23 ಜುಲೈ 2018 (16:04 IST)
ಬಜೆಟ್ ನಲ್ಲಿ ಎಲ್ಲ ಜಿಲ್ಲೆಗಳಿಗೆ ಸಮಪಾಲು ಕೊಟ್ಟಿದ್ದೇನೆ. ಉತ್ತರ ಕರ್ನಾಟಕದ ಜನರಿಗೆ ನಾನು ಯಾವುದೇ ಅನ್ಯಾಯ ಮಾಡಿಲ್ಲಾ. ಬಿಜೆಪಿ ನಾಯಕರು ಇರುವ ಜಾಗಕ್ಕೆ ನಾನೇ ಹೋಗುತ್ತೇನೆ. ಈ ಬಗ್ಗೆ ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಎಬಿವಿಪಿ ಮೂಲಕ ಬಿಜೆಪಿ ಯವರು ಬಸ್ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನನ್ನ ಬಳಿ ಅಷ್ಟು ಸುಲಭವಾಗಿ ರಾಜಕೀಯ ನಡೆಯಲ್ಲ. ಈ ಸರಕಾರ ಆರು ವರೆ ಕೋಟಿ ಜನರ ಸರಕಾರ. ಆದ್ರೆ ಮಾದ್ಯಮಗಳು ಇದನ್ನೆ ದೊಡ್ಡ ವಿಷಯ ಮಾಡಿಕೊಂಡು ಚರ್ಚೆ ನಡೆಸುತ್ತಿವೆ. ಬಿಜೆಪಿ ನಾಯಕರು ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಬೇಕಾದ್ರೆ ಬಿಜೆಪಿ ನಾಯಕರು ಚರ್ಚೆಗೆ ಬರಲಿ ನಾನು ಸಿದ್ಧ ಎಂದರು.

ಹೆಚ್.ಡಿ.ದೇವೇಗೌಡ ಹಾಗೂ ಹೆಚ್‌.ಡಿ.ಕುಮಾರಸ್ವಾಮಿ ಕಾಲದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಷ್ಟು ಅನುದಾನ ಕೊಟ್ಟಿದ್ದೇವೆ ಅಂತಾ ಚರ್ಚೆಗೆ ಬರಲಿ. ಉತ್ತರ ಕರ್ನಾಟಕದ ಜನರಿಗೆ ನಾನು 20 ತಿಂಗಳು ಸಿಎಂ ಆಗಿದ್ದ ವೇಳೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಆದ್ರೆ ಚುನಾವಣೆಯಲ್ಲಿ ಅಲ್ಲಿನ ಜನ್ರು ನನ್ನ ಕೈ ಹಿಡಿಯಲಿಲ್ಲ. ಇವತ್ತು ಅಲ್ಲಿನ ಜನ್ರು ನಮಗೆ ಸಮಸ್ಯೆ ಇದೆ ಸಮಸ್ಯೆ ಇದೆ ಎಂದು ಪ್ರತಿಭಟನೆ ಮಾಡುತ್ತಾರೆ. ಈ  ಬಾರಿ ಚುನಾವಣೆಯಲ್ಲಿ ನನಗೆ ಮತ ಮಾತ್ರ ಹಾಕಿಲ್ಲ. ಬಿಜೆಪಿಯವರು ಸಣ್ಣ ತನದ ಕೀಳುಮಟ್ಟದ ಜಾತಿ ರಾಜಕೀಯ ಮಾಡುತ್ತಿದ್ದಾರೆ. ಕೆಲವರಿಗೆ ಬೇರೆ ರಾಜ್ಯದ ಅವಶ್ಯಕತೆ ಇದೆ, ಬೇಕಾದ್ರೆ ಬೇರೆ ರಾಜ್ಯ ತೆಗೆದುಕೊಳ್ಳಲಿ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೋವಾ ಕಾರಲ್ಲಿ ಆಕಳು ಕದ್ದೊಯ್ದ ಕಳ್ಳರು