Select Your Language

Notifications

webdunia
webdunia
webdunia
webdunia

ಕೌಟಂಬಿಕ ಕಲಹ: ಹಾಡಹಗಲೇ ತಂಗಿಯ ಕತ್ತು ಕೊಯ್ದ ಅಣ್ಣ

ಕೌಟಂಬಿಕ ಕಲಹ: ಹಾಡಹಗಲೇ ತಂಗಿಯ ಕತ್ತು ಕೊಯ್ದ ಅಣ್ಣ
ತುಮಕೂರು , ಶುಕ್ರವಾರ, 22 ಸೆಪ್ಟಂಬರ್ 2017 (19:12 IST)
ಕೌಟಂಬಿಕ ಕಲಹದಿಂದ ಕೋಪಗೊಂಡ ಅಣ್ಣನೊಬ್ಬ ತನ್ನ ಒಡಹುಟ್ಟಿದ ತಂಗಿಯ ಕತ್ತು ಕೊಯ್ದು ಹಾಡಹಗಲೇ ಹತ್ಯೆ ಮಾಡಿದ ಹೇಯ ಘಟನೆ ವರದಿಯಾಗಿದೆ.
ನಗರದ ಎಸ್‌ಎಸ್‌ಪುರಂನಲ್ಲಿ, ಸಹೋದರಿ 23 ವರ್ಷ ವಯಸ್ಸಿನ ಅಂಜಲಿ ಮತ್ತು ಸಹೋದರ ದೇವರಾಜ್ ಜಗಳವಾಡಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದರು ಎನ್ನಲಾಗಿದೆ.
 
ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಎನ್‌ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಲು ಅಂಜಲಿ ತೆರಳಿದ್ದಳು. ಆದರೆ, ಅಲ್ಲಿನ ಪೊಲೀಸರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
 
ಮಹಿಳಾ ಪೊಲೀಸ್ ಠಾಣೆಗೆ ಬಂದು ಹೊರಗಡೆ ಕುಳಿತಿದ್ದಾಗ ಅಲ್ಲಿಗೆ ಬಂದ ಸಹೋದರ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಆಕೆಯ ಕತ್ತು ಕತ್ತರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
  
ಗಂಭೀರವಾಗಿ ಗಾಯಗೊಂಡ ಅಂಜಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ದೇವರಾಜ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ಕೇಸ್ ಹಾಕಿಸಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಗೋ.ಮಧುಸೂದನ್