Publish Date: Wed, 13 Sep 2017 (18:14 IST)
Updated Date: Wed, 13 Sep 2017 (18:17 IST)
ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಇಂದ್ರಜಿತ್ ಲಂಕೇಶ್‌ನನ್ನು ತನಿಖೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ 2006ರಲ್ಲಿ ಇಂದ್ರಜಿತ್ ಲಂಕೇಶ್, ತಮ್ಮ ಸಹೋದರಿ ಗೌರಿ ಲಂಕೇಶ್‌ಗೆ ರಿವಾಲ್ವರ್ ತೋರಿಸಿ ಬೆದರಿಸಿದ್ದರು. ತದನಂತರ ಗೌರಿ ಲಂಕೇಶ್ ಪೊಲೀಸ್ ಠಾಣೆಗೆ ಸಹೋದರನ ವಿರುದ್ಧ ದಾಖಲಿಸಿದ್ದರು.
ಆಕೆಗೆ ರಿವಾಲ್ವರ್ ತೋರಿಸಿದ ಪ್ರಕರಣದ ನಂತರ ಅಕ್ಕನ ಜೊತೆ ನನ್ನ ಸಂಬಂಧ ಉತ್ತಮವಾಗಿತ್ತು. ನಾವು ಪರಸ್ಪರ ಪ್ರೀತಿಯಿಂದಲೇ ಇದ್ದೇವೆ ಎಂದು ಇಂದ್ರಜಿತ್ ಲಂಕೇಶ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಹಳೆಯ ಪ್ರಕರಣ ಕೆದಕಿದಕ್ಕೆ ಗರಂ ಆಗಿರುವ ಇಂದ್ರಜಿತ್ ಲಂಕೇಶ್, ತನಿಖಾಧಿಕಾರಿಗಳ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನನಗೆ ಗೊತ್ತಿಲ್ಲ ಎಂದು ಹೇಳುತ್ತಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.