Publish Date: Wed, 13 Sep 2017 (09:39 IST)
Updated Date: Wed, 13 Sep 2017 (09:44 IST)
ಬೆಂಗಳೂರು: ವಿಚಾರವಾದಿ ಗೌರಿ ಲಂಕೇಶ್ ಮತ್ತು ಎಂಎಂ ಕುಲಬರ್ಗಿ ಸಾವಿಗೀಡಾಗಿದ್ದು ಒಂದೇ ಆಯುಧದಿಂದ ಎಂದು ತನಿಖಾ ತಂಡ ಖಚಿತಪಡಿಸಿದೆ.
ಇವರಿಬ್ಬರ ಹತ್ಯೆ ಮಾಡಲು ಹಂತಕರು 7.65 ಎಂಎಂ ಪಿಸ್ತೂಲ್ ಬಳಸಿರುವುದು ಪಕ್ಕಾ ಎಂದು ತನಿಖಾ ತಂಡ ಹೇಳಿದೆ. ಫಾರೆನ್ಸಿಕ್ ಲ್ಯಾಬ್ ವರದಿಯಿಂದ ಇದು ಖಚಿತವಾಗಿದೆ ಎಂದು ತಿಳಿದುಬಂದಿದೆ.
ಕುಲಬರ್ಗಿಯವರನ್ನು 2015 ರಲ್ಲಿ ಅವರ ನಿವಾಸದ ಎದುರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇತ್ತೀಚೆಗೆ ಗೌರಿ ಲಂಕೇಶ್ ರನ್ನೂ ಅದೇ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಇದರ ವಿಚಾರಣೆಯನ್ನು ವಿಶೇಷ ತನಿಖಾ ದಳ ಮಾಡುತ್ತಿದೆ.