Select Your Language

Notifications

webdunia
webdunia
webdunia
webdunia

ಮೋದಿಯಿಂದ ಭಾರತಕ್ಕೆ ಕಳಂಕ, ಮೋದಿ ನೀಚ ಮನಸ್ಸಿನ ವ್ಯಕ್ತಿ: ಜಿಗ್ನೇಶ್ ಮೇವಾನಿ

ಮೋದಿಯಿಂದ ಭಾರತಕ್ಕೆ ಕಳಂಕ, ಮೋದಿ ನೀಚ ಮನಸ್ಸಿನ ವ್ಯಕ್ತಿ: ಜಿಗ್ನೇಶ್ ಮೇವಾನಿ
ಬೆಂಗಳೂರು , ಮಂಗಳವಾರ, 12 ಸೆಪ್ಟಂಬರ್ 2017 (19:28 IST)
ಪ್ರಧಾನಿ ಮೋದಿ ಎಂಬ ವ್ಯಕ್ತಿ ಭಾರತದ ಹೆಸರು ಹಾಳು ಮಾಡಿ ಕಳಂಕ ತರುತ್ತಿದ್ದಾನೆ. ಆತನೊಬ್ಬ ನೀಚ ಮನಸ್ಸಿನ ವ್ಯಕ್ತಿಯಾಗಿದ್ದಾನೆ ಎಂದು ಗುಜರಾತ್‌ನ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಗುಡುಗಿದ್ದಾರೆ.
ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು,  ಗೌರಿ ಲಂಕೇಶ್ ಕಲಬುರಗಿಯನ್ನು ಯಾಕೆ ಕೊಂದಿದ್ದೀರಿ ಎಂದು ಕೇಂದ್ರ ಸರಕಾರವನ್ನು ಕೇಳಿದ್ದರು. ಇದಕ್ಕೆ ಉತ್ತರಿಸದೆ ಕೇಂದ್ರ ಸರಕಾರ ಗೌರಿ ಲಂಕೇಶ್‌ರನ್ನೇ ಹತ್ಯೆ ಮಾಡಿದೆ ಎಂದು ಕಿಡಿಕಾರಿದರು.
 
ನ್ಯಾಯ ಸಿಗುವವರೆಗೆ ಹೋರಾಟ ನಡೆಸೋಣ. ಗುಜರಾತ್‌ನ ಗಾಂಧಿನಗರಕ್ಕೂ ಹೋಗಿ ಪ್ರಧಾನಿ ಮೋದಿ ತಾಯಿಯನ್ನು ಭೇಚಿಯಾಗಿ ಇಂತಹ ನಾಲಾಯಕ್ ಮಗನಿಗೆ ಏಕೆ ಜನ್ಮ ಕೊಟ್ಟಿದ್ದೀರಿ ಎಂದು ಕೇಳೋಣವೆಂದು ಗುಡುಗಿದರು.
 
ಸಂಗಾತಿಗಳೇ ನವದೆಹಲಿಗೆ ತೆರಳಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ಮೋದಿ ಎದೆ ಮೇಲೆ ಕುಳಿತು ಹೋರಾಡೋಣ ಎಂದು ಕರೆ ನೀಡಿದರು.
 
ಪತ್ರಕರ್ತರನ್ನು ಕೊಲ್ಲಿಸುವ ಸಂಸ್ಕ್ರತಿ ಯಾವ ಮಾಡೆಲ್ ಎನ್ನುವುದನ್ನು ಪ್ರಧಾನಿ ಮೋದಿಯನ್ನು ಪ್ರಶ್ನಿಸಬೇಕಾಗಿದೆ ಎಂದು ಹೋರಾಟಗಾರ ಜಿಗ್ನೇಶ್ ಮೇವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ: ಈಶ್ವರ್ ಖಂಡ್ರೆ