Select Your Language

Notifications

webdunia
webdunia
webdunia
webdunia

ರೈಲಿಗೆ ಸಿಲುಕಿ ವಿಧಾನ ಪರಿಷತ್ ಸದಸ್ಯನ ಸಹೋದರನ ಪುತ್ರ ಆತ್ಮಹತ್ಯೆ

suicide
ಕಲಬುರ್ಗಿ , ಮಂಗಳವಾರ, 19 ಸೆಪ್ಟಂಬರ್ 2017 (20:27 IST)
ಕಲಬುರ್ಗಿ: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಪಿಡಿಎ ಎಂಜಿನಿಯರ್ ಕಾಲೇಜು ಬಳಿಯ ರೈಲ್ವೇ ಹಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸಹೋದರ ಎ.ಜಿ.ಪಾಟೀಲ್ ಪುತ್ರ ಸಂಜಯ್ ಪಾಟೀಲ್(35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಂಜಯ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
webdunia

ಮತ್ತೊಂದೆಡೆ ಬಿದ್ದಾಪುರ ರೈಲ್ವೇ ಗೇಟ್ ಬಳಿ ರೇವಣಸಿದ್ಧ ಪೂಜಾರಿ(35) ಎಂಬ ವ್ಯಕ್ತಿ ರೈಲಿಗೆ ತಲೆ ಕೊಟ್ಟಿದ್ದಾರೆ. ಪೈಂಟರ್ ಕೆಲಸ ಮಾಡುತ್ತಿದ್ದ ರೇವಣಸಿದ್ಧ, ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಸ್.ಈಶ್ವರಪ್ಪ ತಲೆಯಲ್ಲಿ ಮೆದುಳಿಲ್ಲ: ಸಿಎಂ ಸಿದ್ದರಾಮಯ್ಯ